ಕಾಂಗ್ರೆಸ್ 100 ಸ್ಥಾನಗಳ ಗಡಿ ದಾಟದು: ಪ್ರಶಾಂತ್ ಕಿಶೋರ್

Prasthutha|

ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳ ಗಡಿ ದಾಟುವುದು ತುಂಬಾ ಕಷ್ಟ ಎಂದು ಮಾಜಿ ಚುನಾವಣಾ ತಂತ್ರಗಾರ ಮತ್ತು ಜನ್ ಸೂರಜ್ ಸಂಘಟನೆಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

- Advertisement -

ಈ ಚುನಾವಣೆಯಲ್ಲಿ ಕಾಂಗ್ರೆಸ್ 100ರ ಗಡಿ ದಾಟುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ಲೋಕಸಭೆಯಲ್ಲಿ ಕಾಂಗ್ರೆಸ್‍ನ ಪ್ರಸ್ತುತ ಸ್ಥಾನಗಳ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯ ಸಾಧ್ಯತೆಯನ್ನು ನಾನು ಕಾಣುತ್ತಿಲ್ಲ. ವಿರೋಧ ಪಕ್ಷಗಳು 2029ರ ಚುನಾವಣೆಗೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು.ಸೀಟುಗಳ ಸಂಖ್ಯೆ 50-55 ಬಂದರೂ ಅದು ದೇಶದ ರಾಜಕಾರಣವನ್ನೇ ಬದಲಿಸುವುದಿಲ್ಲ ಎಂದರು. ಕಾಂಗ್ರೆಸ್ ಗೆ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಕಾಣುತ್ತಿಲ್ಲ. ದೊಡ್ಡ ಬದಲಾವಣೆಗೆ ಕಾಂಗ್ರೆಸ್ 100ರ ಗಡಿ ದಾಟಬೇಕು. ಆದರೆ, ಕಾಂಗ್ರೆಸ್ 100ರ ಗಡಿ ದಾಟುತ್ತದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿಯ 370 ಸ್ಥಾನಗಳನ್ನು ಗೆಲ್ಲುವ ಗುರಿಯ ಬಗ್ಗೆ ಕೇಳಿದಾಗ, ¾ಬಿಜೆಪಿ ತನ್ನ ಕಾರ್ಯಕರ್ತರಿಗೆ 370 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಿಗದಿಪಡಿಸಿದೆ. 370ನೇ ವಿಯ ಈ ಗುರಿಯನ್ನು ಜನರು ನಿಜವೆಂದು ಪರಿಗಣಿಸಬಾರದು. ಪ್ರತಿಯೊಬ್ಬ ನಾಯಕನಿಗೆ ಗುರಿಗಳನ್ನು ಹೊಂದಿಸುವ ಹಕ್ಕಿದೆ. ಅವರು ಇದನ್ನು ಸಾಸಿದರೆ ಅದು ಅದ್ಭುತವಾಗಿರುತ್ತದೆ, ಸಾಧ್ಯವಾಗದಿದ್ದರೆ ಪಕ್ಷವು ತನ್ನ ತಪ್ಪನ್ನು ಒಪ್ಪಿಕೊಳ್ಳುವಷ್ಟು ವಿನಮ್ರವಾಗಿರಬೇಕು ಎಂದರು.

- Advertisement -

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಬಹುದು ಎಂದು ಪ್ರಶಾಂತ್ ಕಿಶೋರ್ ಇದೇ ಸಂದರ್ಭದಲ್ಲಿ ಹೇಳಿದರು.



Join Whatsapp