ಕರ್ನಾಟಕ ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆ ಇಡೋದಕ್ಕೂ ಸಾಧ್ಯವಿಲ್ಲ: ತಮಿಳುನಾಡು ಸಚಿವ

Prasthutha|

ಚನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಕರ್ನಾಟಕಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಒಪ್ಪಿಗೆಯಿಲ್ಲದೇ ಕರ್ನಾಟಕವು ಮೇಕೆದಾಟು ಯೋಜನೆಗೆ ಒಂದೇ ಒಂದು ಇಟ್ಟಿಗೆಯನ್ನೂ ಸಹ ಇಡೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

- Advertisement -

ಇಂದು ತಮಿಳುನಾಡು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಇದಕ್ಕೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ದುರೈ ಮುರುಗನ್, ಕರ್ನಾಟಕಕ್ಕೆ ಈ ರೀತಿ ಹೇಳಿದ್ದಾರೆ. ನಮ್ಮ ಜೊತೆ ಮಾತುಕತೆ ನಡೆಸದೇ ಮೇಕೆದಾಟು ಯೋಜನೆ ಮಾಡೋದಕ್ಕೆ ಕರ್ನಾಟಕಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಸರ್ಕಾರ ಮೊದಲಿನಿಂದಲೂ ಈ ಪ್ರಸ್ತಾಪವನ್ನು ವಿರೋಧಿಸಿದ್ದೇವೆ. ಜೊತೆಗೆ ಈ ಬಗ್ಗೆ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ. ಆದರೂ ಫೆಬ್ರವರಿ 1 ರಂದು ಕರ್ನಾಟಕ ಸರ್ಕಾರ ಮತ್ತೆ ಮೇಕೆದಾಟು ಯೋಜನೆ ವಿಚಾರವನ್ನು ಪ್ರಸ್ತಾಪಿಸಿತ್ತು. ಈ ವಿಷಯವನ್ನು ಚರ್ಚೆಗೆ ತರಬೇಡಿ ಎಂದು ಡಬ್ಲ್ಯೂಆರ್‌ಡಿ ಕಾರ್ಯದರ್ಶಿಗೆ ತಿಳಿಸಿದ್ದೆವು. ಆದರೆ, ನಮ್ಮ ಮನವಿಯ ಹೊರತಾಗಿಯೂ ಸಿಡಬ್ಲ್ಯೂಎಮ್‌ಎ ಮೇಕೆದಾಟು ವಿಷಯವನ್ನು ಚರ್ಚೆಗೆ ತೆಗೆದುಕೊಂಡಿತ್ತು ಎಂದು ದುರೈ ಮುರುಗನ್ ಹೇಳಿದ್ದಾರೆ.



Join Whatsapp