ಬಿಜೆಪಿ ಟಿಕೆಟ್ ಸಿಗದಿದ್ರೂ ಮಂಡ್ಯದಲ್ಲೇ ಸುಮಲತಾ ಸ್ಪರ್ಧೆ : ಸಂಸದೆ ಆಪ್ತ ಶಶಿಕುಮಾರ್

Prasthutha|

ಮಂಡ್ಯ: ಬಿಜೆಪಿ ಟಿಕೆಟ್ ಸಿಕ್ಕರೂ ಸಿಗದಿದ್ದರೂ ಮಂಡ್ಯದಲ್ಲೆ ಸುಮಲತಾ ಸ್ಪರ್ಧಿಸಲಿದ್ದಾರೆ. ಸುಮಲತಾ ಮಂಡ್ಯ ಕಣದಲ್ಲಿ ಇದ್ದೇ ಇರಲಿದ್ದಾರೆ ಎಂದು ಸಂಸದೆ ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ.

- Advertisement -

ನಾಳೆ ಸಂಜೆ 4 ಗಂಟೆಗೆ ಜೆಪಿ ನಗರ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿದ್ದೇವೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಸಭೆ ಕರೆಯಲಾಗಿದೆ. ಚುನಾವಣೆಯಲ್ಲಿ ಸುಮಲತಾ ಯಾವ ನಿರ್ಧಾರ ಮಾಡಬೇಕು ಎಂದು ಸಭೆಯಲ್ಲಿ ಅಂತಿಮ ನಿರ್ಧಾರವಾದಲಿದೆ ಎಂದರು.

- Advertisement -

ಪ್ರಧಾನಿ ಮೋದಿ ಮತ್ತು ನಡ್ಡಾ ಅವರನ್ಬು ಸುಮಲತಾ ಭೇಟಿ ಮಾಡಿದ್ದಾರೆ. ಹೀಗಾಗಿ ಟಿಕೆಟ್ ನಮಗೆ ಸಿಗುವ ಭರವಸೆ ಇದೆ. ಆದರೆ ಮಂಡ್ಯದಿಂದ ಸುಮಲತಾ ಅಂಬರೀಶ್ ಅವ್ರ ಸ್ಪರ್ಧೆ ಖಂಡಿತವಾಗಿ ಇರಲಿದೆ” ಎಂದರು.



Join Whatsapp