ಬೆಳಗಾವಿಯಲ್ಲೂ ‘ಕನ್ನಡ ಕಡ್ಡಾಯ’ ಹೋರಾಟ: ಕರವೇ

Prasthutha|

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಆದರೆ, ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಕುರಿತು ಬೆಂಗಳೂರು ಮಾದರಿಯ ಹೋರಾಟವನ್ನು ಬೆಳಗಾವಿಯಲ್ಲೂ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.

- Advertisement -

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರೋಧಿಸುತ್ತಿದೆ. ಎಂಇಎಸ್‌ನವರು ನಾಡದ್ರೋಹಿಗಳು. ಕನ್ನಡ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಎಂಇಎಸ್‌ ಮುಖಂಡರು ಹೇಳುತ್ತಿದ್ದಾರೆ. ಒಂದು ವೇಳೆ ಅಂಥ ಹೆಜ್ಜೆ ಇಟ್ಟರೆ ಬೆಂಗಳೂರಿನಲ್ಲಿ ಕನ್ನಡ ವಿರೋಧಿಗಳಿಗೆ ಮಾಡಿದ ಶಾಸ್ತಿಯನ್ನೇ ಇವರಿಗೂ ಮಾಡುತ್ತೇವೆ ಎಂದು ನಾರಾಯಣ ಗೌಡ ಹೇಳಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್‌ ಆಗಲೀ, ಶಿವಸೇನೆ ಆಗಲಿ; ಯಾರು ಬಂದರೂ ನಾವು ಹೋರಾಟಕ್ಕೆ ಸಿದ್ಧ ಎಂದರು.

- Advertisement -

ಬೆಂಗಳೂರು ಉದ್ಯಮಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು 14 ದಿನ ಜೈಲಿಗೆ ಕಳಿಸಿದ್ದಾರೆ ಎಂದ ನಾರಾಯಣ ಗೌಡ, ನಾನು 6ನೇ ಬಾರಿ ಜೈಲಿಗೆ ಹೋಗಿದ್ದೇನೆ ಎಂದರು.



Join Whatsapp