ಉಪ್ಪಳ: ನಕಲಿ ವಿಮಾನ ಟಿಕೆಟ್‌ ನೀಡಿ 23 ಲಕ್ಷ ರೂ. ವಂಚನೆ

Prasthutha|

ಮಂಜೇಶ್ವರ: ನಕಲಿ ವಿಮಾನ ಟಿಕೆಟ್‌ ನೀಡಿ 23 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಕೋಡಿಬೈಲು ಕುರ್ಚಿಪಳ್ಳ ಜಾಸ್ಮಿನ್‌ ಮಂಜಿಲ್‌ನ ಅಬ್ದುಲ್‌ ಹಾಶಿಂ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಯುರೋಪ್‌ನ ಮಾಲ್ಡೋವಾದಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿಯಾದ ತಿರುವನಂತಪುರ ವಿವನ್‌ನಗರ ನಿವಾಸಿ ಅಮಾನ್‌ ಅಬ್ದುಲ್‌ ಅಹಮ್ಮದ್‌ ನೀಡಿದ ದೂರಿನಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಬಿಜೋಯ್‌ ನಿರ್ದೇಶನದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

- Advertisement -

30 ಮಂದಿ ಕೇರಳೀಯ ವಿದ್ಯಾರ್ಥಿಗಳು ಮಾಲ್ಡೋವಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

2023ರಲ್ಲಿ ಇವರಿಗೆ ರಜೆ ಲಭಿಸಿದ ಹಿನ್ನೆಲೆಯಲ್ಲಿ ಊರಿಗೆ ಮರಳಲು ತೀರ್ಮಾನಿಸಿದ್ದರು. ಅಬ್ದುಲ್‌ ಹಾಶಿಂ ಮುಖಾಂತರ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾದಿರಿಸಲಾಗಿತ್ತು. ಬ್ಯಾಂಕ್‌ ಖಾತೆ ಮೂಲಕ 23 ಲಕ್ಷ ರೂ. ಪಡೆದುಕೊಂಡ ಅಬ್ದುಲ್‌ ಹಾಶಿಂ ಟಿಕೆಟ್‌ಗಳನ್ನು ನೀಡಿದ್ದ. ಅನಂತರ ಟ್ರಾವೆಲ್‌ ಸೈಟ್‌ನಲ್ಲಿ ಪರಿಶೀಲಿಸಿದಾಗ ವಿಮಾನ ಟಿಕೆಟ್‌ಗಳು ನಕಲಿಯಾಗಿವೆಯೆಂದು ತಿಳಿದು ತಿಳಿದು ಬಂದಿತ್ತು ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದರು.



Join Whatsapp