ಚಿಕ್ಕಬಳ್ಳಾಪುರ: ಅತ್ತಿಗೆ ಬೆಡ್​ರೂಮ್​ಗೆ ನುಗ್ಗಿದವನನ್ನು ಕೊಂದು ಪೊಲೀಸರಿಗೆ ಶರಣು

Prasthutha|

ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ಅತ್ತಿಗೆಯ ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ಇಂದಿರಾನಗರದಲ್ಲಿ ನಡೆದಿದೆ.

- Advertisement -

ಆಂಜಿನಪ್ಪ(35) ಮೃತ ವ್ಯಕ್ತಿ. ಆಶಾ ಎಂಬುವವರು ಒಂಟಿಯಾಗಿದ್ದ ವೇಳೆ ಆಂಜಿನಪ್ಪ ಬೆಡ್​ರೂಮ್​ಗೆ ನುಗ್ಗಿದ್ದಾನೆ. ಕೂಡಲೇ ಎಚ್ಚೆತ್ತ ಮಹಿಳೆ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಮೈದುನ ರಾಘವೇಂದ್ರ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಆಂಜಿನಪ್ಪನನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Join Whatsapp