ರಾಮನಗರ ವಕೀಲರ ಧರಣಿ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಸಸ್ಪೆಂಡ್

Prasthutha|

ರಾಮನಗರ: ರಾಮನಗರ ವಕೀಲರ ಪ್ರತಿಭಟನೆಗೆ ಸಂಬಂಧಿಸಿದಂತೆ ಐಜೂರು ಠಾಣೆ ಪಿಎಸ್ ಐ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಲಾಗಿದೆ.

- Advertisement -


ಐಜೂರು ಪೊಲೀಸ್ ಇನ್ಸ್ ಪೆಕ್ಟರ್ ತನ್ವೀರ್ ಹುಸ್ಸೇನ್ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಗೃಹ ಸಚಿವ ಜಿ ಪರಮೇಶ್ವರ್ ಸದನಕ್ಕೆ ವಿವರಿಸಿದರು.

ರಾಮನಗರದ ವಕೀಲರು ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು ಮತ್ತು ಅವರೆಲ್ಲ ಇಂದು ಬೆಂಗಳೂರಿಗೆ ಬಂದು ಪ್ರತಿಭಟನೆ ಮುಂದುವರಿಸುವ ಉದ್ದೇಶವಿಟ್ಟಿಕೊಂಡಿದ್ದರು. ಅವರ ಮತ್ತು ವಿರೋಧ ಪಕ್ಷದ ನಾಯಕರ ಆಗ್ರಹದಂತೆ ಪೊಲೀಸ್ ಇನ್ಸ್ ಪೆಕ್ಟರ್ ತನ್ವೀರ್ ಹುಸ್ಸೇನ್ ರನ್ನು ಸಸ್ಪೆಂಡ್ ಮಾಡಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚನ್ನಪಟ್ಟಣದ ಡಿವೈಎಸ್ ಪಿ ತನಿಖೆ ಆರಂಭಿಸಿದ್ದಾರೆ. ತನ್ವೀರ್ ಹುಸ್ಸೇನ್ ರನ್ನು ಸಸ್ಪೆಂಡ್ ಮಾಡಿರುವುದು ತನಿಖೆಗೆ ಸಹಾಯವಾಗಲಿದೆ ಎಂದು ಪರಮೇಶ್ವರ್ ಹೇಳಿದರು. ಹಾಗೆಯೇ ಘಟನೆಗೆ ಕಾರಣವಾದ ವಕೀಲ ಚಾಂದ್ ಪಾಶಾ ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಹೇಳಿದರು.



Join Whatsapp