ಮಾಯಾವತಿ ಬಿಎಸ್‌ಪಿ ಪಕ್ಷ ಇಂಡಿಯಾ ಕೂಟದೊಂದಿಗೆ ಸೇರುವುದಿಲ್ಲ ಇಂದ ಬೆನ್ನಿಗೇ ಸಮಾಹವಾದಿ ಪಕ್ಷ ಕಾಂಗ್ರೆಸ್‌ಗೆ ದೊಡ್ಡ ಷರತ್ತು ವಿಧಿಸಿದೆ. ಇದಕ್ಕೆ ಒಪ್ಪಿದರೆ ಮಾತ್ರ ಇಂಡಿಯಾ ಕೂಟದ ಹೊತೆ ಇರಲಿದ್ದೇವೆ ಎಂದಿದೆ.
ಉತ್ತರಪ್ರದೇಶದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಇರಬೇಕು ಅಂದ್ರೆ ಉತ್ತರಪ್ರದೇಶದಲ್ಲಿರುವ 80 ಸೀಟ್‌ನಲ್ಲಿ ಬರೀ 15 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದು. ಉಳಿದ ಕ್ಷೇತ್ರವೆಲ್ಲ ಎಸ್‌ಪಿಗೆ ಬಿಟ್ಟು ಕೊಡಬೇಕು ಎಂದು ಎಸ್ಪಿ ಷರತ್ತು ಹಾಕಿದೆ.
ಮಾಜಿ ಸಿಎಂ ಅಖಿಲೇಶ್ ಯಾದವ್ ಇಟ್ಟಿರುವ ಈ ಷರತ್ತಿಗೆ ಒಪ್ಪಿದರೆ ಮಾತ್ರ, ಎಸ್‌ಪಿ ಕಾಂಗ್ರೆಸ್‌ನೊಂದಿಗೆ ಇರುತ್ತದೆ. ಇಲ್ಲವಾದಲ್ಲಿ, ಇಂಡಿಯಾ ಒಕ್ಕೂಟದಿಂದ ಸಮಾಜವಾದಿ ಪಕ್ಷವೂ ಹಿಂದೆ ಸರಿಯುತ್ತದೆ ಎಂಬುದು ದೃಢವಾಗಿದೆ.
ಈಗಾಗಲೇ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆ, ಉತ್ತರಪ್ರದೇಶ ಬಂದು ತಲುಪಿದೆ. ಆದರೆ ಅಖಿಲೇಶ್ ಯಾದವ್ ಈ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಕಾರಣವೇನಂದ್ರೆ, ಸೀಟು ಹಂಚಿಕೆ ಬಗ್ಗೆ ರಾಹುಲ್ ಇನ್ನೂ ಷರತ್ತು ಒಪ್ಪಿಲ್ಲ. ಷರತ್ತು ಒಪ್ಪಿದರೆ ಮಾತ್ರ ಅಖೀಲ್ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಇಂಡಿಯಾ ಕೂಡದಲ್ಲಿ ಇರುತ್ತಾರೆ. ಕಾಂಗ್ರೆಸ್ ಈ ಷರತ್ತಿಗೆ ಒಪ್ಪಿಗೆ ನೀಡುತ್ತಾ ಇಲ್ಲವಾ ಅಂತಾ ಕಾದು ನೋಡಬೇಕಿದೆ.