ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಅಮೇಥಿಯಿಂದ ಸ್ಪರ್ಧಿಸಲಿ: ಸ್ಮೃತಿ ಇರಾನಿ ಸವಾಲ್​

Prasthutha|

ಲಖನೌ: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ‌ಬಿರುಸಿನ ಚಟುವಟಿಕೆ ಪ್ರಾರಂಭಿಸಿವೆ. ಪಕ್ಷಾಂತರ, ಟೀಕೆ, ಸವಾಲ್ ಜೋರಾಗುತ್ತಿವೆ. ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಅಮೇಥಿಯಿಂದ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲ್​ ಹಾಕಿದ್ದಾರೆ.

- Advertisement -

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಮೇಥಿಯ ಮಾಜಿ ಸಂಸದ ರಾಹುಲ್​ ಗಾಂಧಿ ಅವರು ಅಮೇಥಿಯ ಜನರನ್ನು ಅವಮಾನಿಸಿದ್ದಾರೆ. 500 ವರ್ಷಗಳ ಹೋರಾಟದ ಬಳಿಕ ಸಿಕ್ಕ ಗೆಲುವಿನಲ್ಲಿ ಆಯೋಧ್ಯೆಯಲ್ಲಿ ನಿರ್ಮಾಣವಾದ ರಾಮ್ ಲಲ್ಲಾ ಅವರ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಗಾಂಧಿ ಕುಟುಂಬ ತಿರಸ್ಕರಿಸಿ ಅವಮಾನ ಮಾಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಧೈರ್ಯವಿದ್ದರೆ ಈ ಬಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಲಿ ನಾನು ಅವರ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸುವುತ್ತೇನೆ ಎಂದು ರಾಹುಲ್​ ಗಾಂಧಿಗೆ ಸವಾಲ್​ ಹಾಕಿದ್ದಾರೆ.



Join Whatsapp