ತಡರಾತ್ರಿ ಮೋದಿ, ಅಮಿತ್​ ಶಾ ಜೊತೆ ಮಾತುಕತೆ: ಆಝಾದ್ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಗರಂ

Prasthutha|

ಶ್ರೀನಗರ:ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಫಾರೂಕ್ ಅಬ್ದುಲ್ಲಾ ರಾತ್ರಿ ವೇಳೆ ಗೌಪ್ಯವಾಗಿ ಮಾತುಕತೆ ನಡೆಸುತ್ತಾರೆ. ಸಾರ್ವಜನಿಕರ ಕಣ್ತಪ್ಪಿಸಿ ಈ ಭೇಟಿ ನಡೆಯುತ್ತಿದೆ ಎಂದು ಖಾಸಗಿ ಸುದ್ದಿ ವಾಹನಿಗೆ ನೀಡಿದ ಸಂದರ್ಶನದ ವೇಳೆ ಗುಲಾಂ ನಬಿ ಆಜಾದ್ ಆರೋಪ ಮಾಡಿದ್ದರು. ಇದಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠ ಫಾರೂಕ್ ಅಬ್ದುಲ್ಲಾ  ಗರಂ ಆಗಿ, ಆಝಾದ್ ಈ ರೀತಿ‌ ಆರೋಪಿಸಿ ನನಗೆ ಅಪಕೀರ್ತಿ ತರಲು ಯತ್ಮಿಸುತ್ತಾರೆ ಎಂದಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಫಾರುಕ್​ ಅಬ್ದುಲ್ಲಾ, ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಾನು ನನ್ನ ಮಗ ಹಗಲಿನಲ್ಲೇ ಹೋಗುತ್ತೇವೆ. ರಾತ್ರಿ ಯಾಕೆ ಹೋಗಬೇಕು ಎಂದು ಕೇಳಿದ್ದಾರೆ.

ಗುಲಾಂ ನಬಿ ಆಜಾದ್​ ಅವರು ನನಗೆ ಅಪಕೀರ್ತಿ ತರುವ ಅವರ ಆಲೋಚನೆ ಹಿಂದೆ ಯಾವ ಕಾರಣವಿದೆ ಎಂಬುದು ನನಗೆ ತಿಳಿದಿಲ್ಲ. ಯಾರು ರಾಜ್ಯಸಭಾ ಸ್ಥಾನವನ್ನು ಕೊಡದೇ ಇದ್ದಾಗ ಅವರನ್ನು ಕರೆದು ಕೊಟ್ಟಿದ್ದೇನೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಮನೆಯಲ್ಲಿ ಕುಳಿತಿರುವ ಏಜೆಂಟ್ ಯಾರು ಎಂದು ಅವರೇ ಹೇಳಬೇಕು ಎಂದು ಹೇಳಿದ್ದಾರೆ.



Join Whatsapp