ಬೆಂಗಳೂರು: ತೆರಿಗೆ ಕಟ್ಟದಿದ್ದ ಕಾರಣ ನೀಡಿ ಬಿಬಿಎಂಪಿ ಅಧಿಕಾರಿಗಳು ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾಲಕತ್ವದ ರಾಕ್ಲೈನ್ ಮಾಲ್ ಬೀಗಮುದ್ರೆ ಜಡಿದಿದ್ದರು. ಈಗ ಬೀಗ ತೆರವಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ಮಾಲ್ 2011 ರಿಂದ 2023ರವರೆಗೆ 11.51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿಯೂ ಬಾಕಿ ಪಾವತಿಸದ ಹಿನ್ನೆಲೆ ಮಾಲ್ಗೆ ಬೀಗ ಹಾಕಲಾಗಿತ್ತು.
ಆದರೆ ರಾಕ್ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್, ನಮಗೆ ನೋಟಿಸ್ ಕೊಡದೇ ಮಾಲ್ಗೆ ಬೀಗ ಹಾಕಿದ್ದಾರೆ ಎಂದು ಹೇಳಿದ್ದರು.
ಬಿಬಿಎಂಪಿ ಆದೇಶ ಪ್ರಶ್ನಿಸಿ ರಾಕ್ಲೈನ್ ವೆಂಕಟೇಶ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿದಾರರಿಗೆ ಅವಕಾಶ ನೀಡಿ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.