ʼಕಲ್ಲಡ್ಕ ರಿಪಬ್ಲಿಕ್ʼ‌ ಅನ್ನು ಜೈಲಿನಲ್ಲಿಟ್ಟರೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ: ಬಿಕೆ ಹರಿಪ್ರಸಾದ್

Prasthutha|

ಬೆಂಗಳೂರು: ಕಲ್ಲಡ್ಕ ರಿಪಬ್ಲಿಕ್ ಅನ್ನು ಒಂದು ದಿನದ ಮಟ್ಟಿಗಾದರೂ ಜೈಲಿನಲ್ಲಿಡಬೇಕು. ಹಾಗಾದರೆ ಇಡೀ ರಾಜ್ಯ ಕುವೆಂಪು ಬಯಸಿದಂತಹ ಸರ್ವ ಜನಾಂಗದ ಶಾಂತಿಯ ತೋಟ ಆಗುತ್ತದೆ ಎಂದು ವಿಧಾನ ಪರಿಷತ್ತಿನ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

- Advertisement -

ಸೌಹಾರ್ದ ಸಭಾಂಗಣದಲ್ಲಿ ನಡೆದ ‘ವಿ.ಡಿ. ಸಾವರ್ಕರ್: ಏಳು ಮಿಥ್ಯಗಳು’ ಕೃತಿ ಬಿಡುಗಡೆ ಹಾಗೂ ‘ಮತೀಯ ಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು. ʼಕಲ್ಲಡ್ಕ ರಿಪಬ್ಲಿಕ್ʼ ಕರ್ನಾಟಕವನ್ನು ಹಿಡಿತದಲ್ಲಿ ಇಟ್ಟುಕೊಳ್ಳುಲು ಪ್ರಯತ್ನಿಸುತ್ತಿದ್ದು, ಇದರಿಂದ ನಾಡಿನ ಶಾಂತಿ ಹಾಳಾಗುತ್ತಿದೆ. ಇದನ್ನು ನಿಯಂತ್ರಿಸಲು ಸರಕಾರದ ಮೇಲೆ ಒತ್ತಡ ತರಬೇಕು ಎಂದಿದ್ದಾರೆ.

ಹಿಂದಿನ ಘಟನೆಯೊಂದನ್ನು ಉದಾಹರಣೆ ನೀಡಿ ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಬಂಧಿಸಲು ಅವರು ಕಾಂಗ್ರೆಸ್ ಸರಕಾರಕ್ಕೆ ಆಗ್ರಹಿಸಿದರು.

- Advertisement -

ಚುನಾವಣಾ ವಿಚಾರವಾಗಿ ರಾಜಸ್ಥಾನಕ್ಕೆ ಹೋಗಿದೆ, ಅಲ್ಲಿ ಆರೆಸ್ಸೆಸ್‍ನ ಪ್ರವೀಣ್ ತೋಗಾಡಿಯಾ ಜನರಿಗೆ ತ್ರಿಶೂಲವನ್ನು ಹಂಚುತ್ತಿದ್ದರು. ಇದು ಕಾನೂನಿಗೆ ವಿರುದ್ಧವಾಗಿದ್ದು, ಅವರನ್ನು ಬಂಧಿಸುವಂತೆ ಅಲ್ಲಿನ ಸರಕಾರವನ್ನು ಒತ್ತಾಯಿಸಿದೆ. ಅದಕ್ಕೆ ಅವರನ್ನು ಬಂಧಿಸಿದರೆ ಗುಜಾರಾತ್‍ನಲ್ಲಿ ಗಲಭೆಯಾಗುತ್ತದೆ ಎಂದು ನನಗೆ ತಿಳಿಸಿದ್ದರು. ಆದರೆ ಅದೇ ತೋಗಾಡಿಯಾರನ್ನು ಜೈಲಿಗೆ ಹಾಕಿದಾಗ ನೋಡಲು ಅವರ ತಂಗಿಯಲ್ಲದೆ ಬೇರೆ ಯಾರೂ ಬರಲಿಲ್ಲ. ಒಂದು ವಾರ ಜೈಲಿನಲ್ಲಿದ್ದ ತೋಗಾಡಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಬಿಡುಗಡೆ ಮಾಡುವಂತೆ ಅಂಗಲಾಚಿದರು. ಈ ಘಟನೆ 20 ವರ್ಷಗಳ ಹಿಂದೆ ನಡೆದಿದ್ದಾಗಿದೆ. ಅಂದಿನಿಂದ ಇಲ್ಲಿಯವರೆಗೂ ತೊಗಾಡಿಯಾ ತ್ರಿಶೂಲವನ್ನು ಹಂಚಲಿಲ್ಲ ಎಂಬುದು ಗಮನಾರ್ಹ. ಕರ್ನಾಟಕ ಸರಕಾರ ಕೂಡ ಇದೇ ಕ್ರಮವನ್ನು ಪಾಲಿಸಬೇಕು ಎಂದು ಬಿಕೆ ಹರಿಪ್ರಸಾದ್ ಸರಕಾರವನ್ನು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ತಡಗಡಲೆ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಶಂಕುಲ್ ಇಸ್ಲಾಂ, ಡಾ. ಕೆ ಪ್ರಕಾಶ್ ಭಾಗವಹಿಸಿದ್ದರು.



Join Whatsapp