ಏನಿಲ್ಲಾ.. ಏನಿಲ್ಲಾ… ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿಲ್ಲ..: ವಿಧಾನಸೌಧದ ಮುಂದೆ ಬಿಜೆಪಿ ಪ್ರತಿಭಟನೆ

Prasthutha|

ಬೆಂಗಳೂರು: ಏನಿಲ್ಲಾ.. ಏನಿಲ್ಲಾ… ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿಲ್ಲ.., ಓಳು ಬರಿ ಓಳು ಅಂತ ಹಾಡು ಹೇಳುವ ಮೂಲಕ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿದೆ.

- Advertisement -


ವಿಧಾನಸಭೆ ಪ್ರವೇಶದ್ವಾರದಲ್ಲಿ ವಿಪಕ್ಷ ಬಿಜೆಪಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದು, ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್ನಲ್ಲಿ ಏನಿಲ್ಲ, ಓಳು ಓಳು ಬಜೆಟ್ ಬರೀ ಓಳು ಎಂದು ಘೋಷಣೆಗಳನ್ನು ಕೂಗಲಾಗುತ್ತಿದೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಭಾಗಿಯಾಗಿದ್ದಾರೆ.


ಬಡವರಿಗೆ ಯುವಕರಿಗೆ ಮಹಿಳೆಯರಿಗೆ ಯಾವುದೇ ರೀತಿಯಾದ ಪ್ರಯೋಜನವಿಲ್ಲ. ಬಜೆಟ್ ನಲ್ಲಿ ಏನಿಲ್ಲ ಅಂತ ಟೀಕಿಸಿದರು. ಬೆಂಗಳೂರಿಗೆ ಏನಿಲ್ಲ, ಬಡವರಿಗೆ ಏನಿಲ್ಲ, ಮಾಧ್ಯಮ ವರ್ಗದವರಿಗೆ ಏನಿಲ್ಲ, ಯುವಕರಿಗೆ ಏನಿಲ್ಲ ಎಂದು ಆರ್.ಅಶೋಕ್ ಆಕ್ರೋಶ ಹೊರಹಾಕಿದರು.



Join Whatsapp