ಮಂಗಳೂರು: ಜೇರೊಸಾ ಶಾಲಾ ಶಿಕ್ಷಕಿ ರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಶಾಲಾ ಮಕ್ಕಳ ಮೇಲೆ ಧಾರ್ಮಿಕ ಅತಿರೇಕತನವನ್ನು ಹೇರಿದ್ದಾರೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೆರೋಸಾ ಶಿಕ್ಷಣ ಸಂಸ್ಥೆಯ ಹೊರಗೆ ಎಳೆ ವಿದ್ಯಾರ್ಥಿಗಳನ್ನು ಜಮಾಯಿಸಿಕೊಂಡು ಅತಿರೇಕದ ಘೋಷಣೆ ಕೂಗಿದ್ದಾರೆ. ಆ ಮೂಲಕ ಕಾಮತ್ ಅವರು ಮಂಗಳೂರಿನ ಎಳೆ ಶಾಲಾ ಮಕ್ಕಳ ಮೇಲೆ ಧಾರ್ಮಿಕ ಅತಿರೇಕತನವನ್ನು ಹೇರಿದ್ದಾರೆ. ಮುಂದುವರಿದು ಕಾಮತ್ ರವರು ಇತರ ಧರ್ಮವು ನಂಬುವ ದೇವನ ಹೆಸರನ್ನು ಪ್ರಸ್ತಾಪಿಸಿ ಎಳೆದು ಹಾಕಿದ್ದಾರೆ, ಇನ್ನೂ ಶಿಕ್ಷಣದ ಪ್ರಾಥಮಿಕ ಹಂತವನ್ನೂ ತಲುಪದ, ಧರ್ಮ ಅಧರ್ಮ ಎನೆಂದೂ ಅರಿಯದ ಎಳೆ ವಿದ್ಯಾರ್ಥಿಗಳನ್ನು ಬಹಿರಂಗವಾಗಿ ರಸ್ತೆ ಬದಿಯಲ್ಲಿ ಜಮಾಯಿಸಿ ಕೊಂಡು ಶೈಕ್ಷಣಿಕ ವಾತಾವರಣವನ್ನು ಕಲುಷಿತ ಗೊಳಿಸಿದ್ದೂ ಅಲ್ಲದೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದರು.
ಎಳೆ ವಿದ್ಯಾರ್ಥಿಗಳನ್ನು ಧಾರ್ಮಿಕ ಘೋಷಣೆಗಳ ಮೂಲಕ ಮುಕ್ತವಾಗಿ ಪ್ರೇರಿಪಿಸುವುದು ಅಪರಾಧ. ಇಂತಹ ಬೆಳವಣಿಗೆಗಳು ವೈದಿಕರಿಗೆ ತಮ್ಮ ಧಾರ್ಮಿಕ ಮೀಸಲಾತಿಯನ್ನು ನಿರಾಕರಿಸಿದ ಕಾರಣಕ್ಕೆ ಸೃಷ್ಟಿಯಾದ ಘಟನೆ ಇದಾಗಿದೆ. ಹಾಲಿ ವೈದಿಕ ಸಮುದಾಯಕ್ಕೆ ಧಾರ್ಮಿಕ ಹಕ್ಕಿನ ನಿರಾಕರಣೆಯಿಂದಾಗಿ ಇಂದು ಇಂತಹ ಅಪಕ್ವ ಘಟನೆಗಳ ವ್ಯಾಪಕತೆಗೆ ಕಾರಣವಾಗಿದೆ. ವೇದವ್ಯಾಸ ಕಾಮತ್ ರವರು ತಮ್ಮ ಅತಿರೇಕವನ್ನು ಬೀದಿಗೆ ತಂದು ನಿಲ್ಲಿಸಿದ್ದು ಖಂಡನೀಯ ಎಂದರು.