ಮನೀಶ್ ಸಿಸೋಡಿಯಾಗೆ 3 ದಿನ ಜಾಮೀನು

Prasthutha|

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಎಎಪಿಯ ಹಿರಿಯ ಮುಖಂಡ ಮನೀಶ್ ಸಿಸೋಡಿಯಾ ಅವರಿಗೆ ಅವರ ಸೋದರ ಸೊಸೆಯ ಮದುವೆಯಲ್ಲಿ ಭಾಗವಹಿಸಲು ದೆಹಲಿ ನ್ಯಾಯಾಲಯ ಸೋಮವಾರ ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ.

- Advertisement -


ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಫೆಬ್ರವರಿ 13-15 ರವರೆಗೆ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ಮನೀಶ್ ಸಿಸೋಡಿಯಾಗೆ ಜಾಮೀನು ನೀಡಿದ್ದಾರೆ .



Join Whatsapp