ಜನರ ವಿರೋಧ ಅರಿತು ಧ್ವಜ ಪ್ರಕರಣದಿಂದ ಹಿಂದೆ ಸರಿದ ಬಿಜೆಪಿ, ಜೆಡಿಎಸ್: ಚೆಲುವರಾಯಸ್ವಾಮಿ

Prasthutha|

ಮಂಡ್ಯ: ಮಂಡ್ಯದ ಜನತೆ ಧ್ವಜ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧವಾಗಿದ್ದಾರೆ. ಇದು ಅರ್ಥವಾದ ಮೇಲೆ ಬಿಜೆಪಿ, ಜೆಡಿಎಸ್ ಸ್ವಲ್ಪ ಹಿಂದೆ ಬಂದಿದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

- Advertisement -


ಮಂಡ್ಯ ಬಂದ್ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಸಂವಿಧಾನದ ವಿರುದ್ಧ ಪ್ರಜಾಪ್ರಭುತ್ವದ ವಿರುದ್ಧ, ರಾಷ್ಟ್ರಧ್ವಜದ ವಿರುದ್ಧ ಅವರು ಘೋಷಣೆ ಕೂಗಿದ್ದಾರೆ. ಹನುಮನ ಧ್ವಜ ಹಾರಿಸಲು ಅದಕ್ಕೆ ಆದ ಜಾಗ ಇದೆ. ವೈಯಕ್ತಿಕ ಧರ್ಮದ ವಿಚಾರದಲ್ಲಿ ಯಾರದ್ದು ತಪ್ಪು ಎನ್ನಲ್ಲ. ಆದರೆ ಅದಕ್ಕೊಂದು ಇತಿಮತಿ ಇದೆ. ಮೊದಲನೇ ಆದ್ಯತೆ ಸಂವಿಧಾನ, ಮೊದಲನೆಯ ಆದ್ಯತೆ ಪ್ರಜಾಪ್ರಭುತ್ವ, ಮೊದಲನೇ ಆದ್ಯತೆ ಭಾರತ ದೇಶ ಇದನ್ನ ಬಿಟ್ಟು ಈ ಫ್ಲಾಗ್ ಹಾರಿಸಿದ್ದೆ ತಪ್ಪು. ಬಿಜೆಪಿ, ಜೆಡಿಎಸ್ ಗೆ ಜನತೆಯೇ ಉತ್ತರ ಕೊಡಬೇಕು ಎಂದರು.



Join Whatsapp