ಬೆಂಗಳೂರು: ದೇಶದ್ರೋಹಿ ಹೇಳಿಕೆ ನೀಡಿದ ಸಂಸದ ಡಿಕೆ ಸುರೇಶ್ ಗೆ ಗುಂಡಿಕ್ಕಬೇಕು ಎಂಬ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರ, ‘ಈಶ್ವರಪ್ಪಗೆ ಸಚಿವ ಎಚ್ ಕೆ ಪಾಟೀಲ್ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇಂಥಹ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ಒಮ್ಮಿಂದೊಮ್ಮೆಲೆ ಹೀರೋ ಆಗುತ್ತೇವೆ ಎನ್ನುವ ಕಲ್ಪನಾ ಲೋಕದಲ್ಲಿ ಇರುತ್ತಾರೆ. ಆದ್ದರಿಂದಲೇ ಬಹಳ ದೊಡ್ಡ ಪ್ರಮಾದಗಳನ್ನು ಮಾಡುತ್ತಿರುತ್ತಾರೆ ಎಂದು ಕಿಡಿಕಾರಿದರು.
ರಾಜಕಾರಣದಲ್ಲಿ 40 ರಿಂದ 50 ವರ್ಷ ಇರುವಂತವರು ಈ ರೀತಿಯ ಮಾತುಗಳನ್ನಾಡುವುದು ಸಮಾಜದ ಮೇಲೆ ಬಹಳ ದುಷ್ಪರಿಣಾಮವನ್ನು ಬೀರುತ್ತವೆ. ಆದ್ದರಿಂದ 24 ಗಂಟೆಯೊಳಗೆ ಈಶ್ವರಪ್ಪ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.