ಸುರತ್ಕಲ್: ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಸುರತ್ಕಲ್ ಏರಿಯಾ ವತಿಯಿಂದ ತೃತೀಯ ವಾರ್ಷಿಕೋತ್ಸವ ಮತ್ತು ಇದರ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣೆ, ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮ ಏರಿಯಾ ಅಧ್ಯಕ್ಷ ಕಬೀರ್ ಸುರತ್ಕಲ್ ಅಧ್ಯಕ್ಷತೆಯಲ್ಲಿ ನಡೆಯಿತು
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕು ಮತ್ತು ಅವಕಾಶಗಳಿಗೆ ದ್ವನಿಯಾಗುತ್ತಾ ಸರಕಾರ ಮತ್ತು ಕಾರ್ಮಿಕರ ನಡುವೆ ಸೇತುವೆಯಾಗಿ ಯೋಜನೆಗಳ ಗರಿಷ್ಠ ಫಲಾನುಭವಿಗಳಾಗಳು ಶ್ರಮಿಸುವ ಒಂದು ಒಕ್ಕೂಟವಾಗಿದೆ SDTU. ಇದರ ಒಂದು ಭಾಗವಾಗಿ ಆಟೋ ಚಾಲಕರ ಯೂನಿಯನ್ ಕಾರ್ಯನಿರ್ವಹಿಸುತ್ತಿದೆ ಎಂದರು.
ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಮುಹಮ್ಮದ್ ಅಶ್ರಫ್ ಮಾತನಾಡಿ, ಮದ್ಯ ರಾತ್ರಿ ಎಂದೂ ಲೆಕ್ಕಿಸದೆ ತುರ್ತು ಮತ್ತು ಇತರ ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸುವ ಮನೋಭಾವವನ್ನು ಬೆಳೆಸಿ ವೃತ್ತಿಯೊಂದಿಗೆ ಸೇವೆಯನ್ನು ರಿಕ್ಷಾ ಚಾಲಕರು ಉಸಿರಾಗಿಸಿದ್ದಾರೆ, ರಿಕ್ಷಾ ಚಾಲಕರ ಈ ಸೇವೆ ಮತ್ತು ಇಂದು ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಮತ್ತು ಇತರ ಸಾಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು
ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯೆ ಶಂಶಾದ್ ಅಬೂಬಕ್ಕರ್, ಕರ್ನಾಟಕ ಕರಾವಳಿ ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ರಫೀಕ್, ನ್ಯಾಯವಾದಿ ಇಸ್ಮಾಯಿಲ್, ಸಿದ್ದೀಕ್ ಕಣ್ಣಂಗಾರ್, ಜಯ ಕರ್ನಾಟಕ ಯೂನಿಯನ್ ಅಧ್ಯಕ್ಷ ದಯಾನಂದ ಕೊಡಿಂಬಾಡಿ, ಶ್ರೀನಿವಾಸ್ ಫಿಟ್ಟರ್ ಈ ಸಂದರ್ಭದಲ್ಲಿ ಮಾತನಾಡಿದರು.
ಗರಿಷ್ಠ ಅಂಕ ಪಡೆದ 12 ವಿದ್ಯಾರ್ಥಿಗಳು ಸೇರಿ ಒಟ್ಟು 88 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕ್ರಿಕೆಟ್ ಪಂದ್ಯಾಟದಲ್ಲಿ SDTU ತಂಡ ಪ್ರಥಮ, ಜಯಕರ್ನಾಟಕ ದ್ವಿತೀಯ ಟ್ರೋಫಿ ಪಡೆಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 126 ಶಿಬಿರಾರ್ಥಿಗಳು ಭಾಗವಹಿಸಿದರು. ಹಾಡುಗಾರ ಅಬ್ಬಾಸ್ ಚೊಕ್ಕಬೆಟ್ಟು ವಿವಿಧ ಹಾಡು ಹಾಡಿದರು.
ಯೂನಿಯನ್ ಕಾರ್ಯದರ್ಶಿ ಇಬ್ರಾಹಿಂ ಎಮ್ಎನ್ ವಾರ್ಷಿಕ ವರದಿ ವಾಚಿಸಿದರು, ಜಿಲ್ಲಾ ಸಮಿತಿ ಸದಸ್ಯ ಇರ್ಫಾನ್ ಕಾನ ಸ್ವಾಗತಿಸಿ ಸಮದ್ ಕಾಟಿಪಳ್ಳ ನಿರೂಪಿಸಿದರು