ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆಯಿಂದ ಕಪ್ಪು ಪತ್ರ ಬಿಡುಗಡೆ

Prasthutha|

ನವದೆಹಲಿ: ಎಲ್ಲಿ ಬಿಜೆಪಿ ಸರ್ಕಾರ ಇಲ್ಲವೋ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ. ನೆಹರು ಕಾಲದಲ್ಲಿ ನಿರ್ಮಾಣವಾದ ಸಂಸ್ಥೆಯಿಂದ ಜನರಿಗೆ ಉದ್ಯೋಗ ಸಿಗುತ್ತಿದೆ. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ಅಥವಾ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement -


ಕೇಂದ್ರ ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡುವ ಮೊದಲೇ ತಮ್ಮ ನಿವಾಸದಲ್ಲಿ ಕಪ್ಪು ಪತ್ರದ ಪೋಸ್ಟರ್ ರಿಲೀಸ್ ಮಾಡಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.


ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎಂಬ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.



Join Whatsapp