ಬೆಂಗಳೂರಿನಲ್ಲಿ ಡಬ್ಬಲ್ ಮರ್ಡರ್

Prasthutha|

ಬೆಂಗಳೂರು: ನಗರದ ಕುಂಬಾರಪೇಟೆ ಹರಿ ಮಾರ್ಕೆಟಿಂಗ್ ಒಳಗೆ ಡಬ್ಬಲ್ ಮರ್ಡರ್ ಘಟನೆ ನಡೆದಿದೆ.

- Advertisement -

ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹರಿ ಮಾರ್ಕೆಟಿಂಗ್ ಒಳಗಡೆ ಸುರೇಶ್ (55) ಹಾಗೂ ಮಹೇಂದ್ರ (68) ಹತ್ಯೆಗೊಳಗಾದವರು.

ಆಸ್ತಿಯ ವಿಚಾರಕ್ಕಾಗಿ ಈ ಮರ್ಡರ್ ನಡೆಸಿದೆ ಎನ್ನಲಾಗುತ್ತಿದೆ. ಮೃತರಿಬ್ಬರ ಸಂಬಂಧಿ ಭದ್ರ ಎಂಬಾತನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಆತ ಹತ್ಯೆಯ ಬಳಿಕ ಪೊಲೀಸರಿಗೆ ಶರಣಾಗಿರೋದಾಗಿ ತಿಳಿದು ಬಂದಿದೆ.

- Advertisement -

ಸ್ಥಳಕ್ಕೆ ಧಾವಿಸಿರೋ ಹಲಸೂರು ಗೇಟ್ ಠಾಣೆಯ ಪೊಲೀಸರು, ಡಿಸಿಪಿ ಶೇಖರ್, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿ ಭದ್ರ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಡಿಸಿಪಿ ಶೇಖರ್, ಡಬ್ಬಲ್ ಮರ್ಡರ್ ಮಾಡಿರೋ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ



Join Whatsapp