ಅನುದಾನದಲ್ಲಿ ಅನ್ಯಾಯ: ಇಂದಿನ ಪ್ರತಿಭಟನೆಗೆ ರಾಜ್ಯ ಸರ್ಕಾರಕ್ಕೆ ಅರ್ಧ ಗಂಟೆ ಮಾತ್ರ ಅವಕಾಶ

Prasthutha|

ನವದೆಹಲಿ: ಅನುದಾನದಲ್ಲಿ ಅನ್ಯಾಯ ವಿರೋಧಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರ ದೆಹಲಿಯ ಜಂತರ್​ ಮಂತರ್​ನಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಘೋಷವಾಕ್ಯದಡಿ ಇಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ದೆಹಲಿ ಪೊಲೀಸರು ಬರೀ ಅರ್ಧ ಗಂಟೆ ಅವಕಾಶ ನೀಡಿದ್ದಾರೆ.

- Advertisement -

ಇಂದು ಬೆಳಗ್ಗೆ (7.2/2024) 11 ಘಂಟೆಗೆ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ದೆಹಲಿ ಪೊಲೀಸ್​ ಮಧ್ಯಾಹ್ನ 12.30ರಿಂದ 1ರವರೆಗೆ ಮಾತ್ರ ಜಂತರ್ ಮಂತರ್​​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದೆ.

ದೆಹಲಿ ಚಲೋ ಪಕ್ಷದ ಪ್ರತಿಭಟನೆಯಲ್ಲ. ಸರ್ಕಾರದ ಪ್ರತಿಭಟನೆ, ರಾಜ್ಯಕ್ಕೆ ಆಗ್ತಿರೋ ಅನ್ಯಾಯ ಸರಿಪಡಿಸಲು ಬಿಜೆಪಿ ಸಂಸದರು ಪ್ರತಿಭಟನೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ.

- Advertisement -

ಮಾಜಿ ಪ್ರಧಾನಿ ದೇವೇಗೌಡರಿಗೂ ಪತ್ರ ಬರೆದಿದ್ದಾರೆ. ಇಂದು ನಡೆಯುವ ಪ್ರತಿಭಟನೆಗೆ ಹೊಸ ಟಚ್​ ಕೊಡುವ ಸಲುವಾಗಿ ಸಚಿವ ಪ್ರಿಯಾಂಕ್​ ಖರ್ಗೆ ಕನ್ನಡ ಬಾವುಟಗಳನ್ನು ದೆಹಲಿಗೆ ತಂದಿದ್ದಾರೆ.



Join Whatsapp