ಬೆಳಗಾವಿ: ಕಬ್ಬಿನ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಮಹಿಳಾ ಕೂಲಿ ಕಾರ್ಮಿಕರು ಸಾವು

Prasthutha|

ಬೆಳಗಾವಿ: ಕಬ್ಬನ್ನು ಕಾರ್ಖಾನೆಗೆ ಸಾಗಣೆ ಮಾಡುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ನಾಲ್ವರು ಪಾದಚಾರಿ ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

- Advertisement -

ಮಾಲಾಬಾಯಿ ರವಸಾಬ್ ಐನಾಪುರೇ (61), ಚಂಪಾ ಲಕ್ಕಪ್ಪ ತಳಕಟ್ಟಿ (50), ಭಾರತಿ ವಡ್ರಾಳೇ (40) ಹಾಗೂ ಶೇಕೂ ನರಸಾಯಿ (45) ಮೃತರು. ಇವರು ಕೃಷಿ ಕೂಲಿ ಕಾರ್ಮಿಕರು.

ಮೂವರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೋರ್ವ ಮಹಿಳೆ ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಕಾರ್ಖಾನೆಗೆ ಕಬ್ಬು ಸಾಗಾಟ ಟ್ರಾಕ್ಟರ್ ಟೇಲರ್ ಪಲ್ಟಿಯಾಗಿ ಪಾದಚಾರಿಗಳ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

- Advertisement -

ಶೇಡಬಾಳ ಗ್ರಾಮದ ಸಮೀಪ ಜಮಖಂಡಿ ಮೀರಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಟ್ರಾಕ್ಟರ್ ಟೇಲರ್ ಚಕ್ರ ಕಟ್ಟಾಗಿ ಪಾದಚಾರಿ ಮೇಲೆ ಬಿದ್ದಿದೆ. ನಾಲ್ಕು ಜನ ಕೃಷಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಭೇಟಿ ಮಾಡಿದ್ದಾರೆ. ಕಾಗವಾಡ ಠಾಣೆ ಪೊಲೀಸರು ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.



Join Whatsapp