ಜಾರ್ಖಂಡ್: ನಾಳೆವರೆಗೂ ಕೈ ಶಾಸಕರು ಹೈದರಾಬಾದ್ ರೆಸಾರ್ಟ್‌ ಬಂಧನದಲ್ಲಿ!

Prasthutha|

ದರಾಬಾದ್‌ : ಜಾರ್ಖಂಡ್‌ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌‌ಗೆ ಆಪರೇಷನ್‌ ಭೀತಿ ಶುರುವಾಗಿದೆ. ತನ್ನ ಶಾಸಕರನ್ನು ಹೈದರಾಬಾದ್‌ ಹೊರವಲಯದಲ್ಲಿರುವ ರೆಸಾರ್ಟ್‌ ನಲ್ಲಿ ಕಲೆಹಾಕಲಾಗಿದೆ. ಸೋಮವಾರದವರೆಗೂ ಅಲ್ಲೇ ಇರಿಸಲಾಗುತ್ತದೆ.

- Advertisement -

ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಚಂಪೈ ಸೋರೆನ್‌ ನಾಳೆ (ಸೋಮವಾರ) ಸದನದಲ್ಲಿ ತಮ್ಮ ಬಲಾಬಲ ಪ್ರದರ್ಶಿಸಲಿದ್ದಾರೆ. ಅದೇ ದಿನದಂದು ಕಾಂಗ್ರೆಸ್‌ ಶಾಸಕರನ್ನು ನೇರವಾಗಿ ಕರೆತರಲಾಗುತ್ತದೆ.

ಜಾರ್ಖಂಡ್‌‌ನಲ್ಲಿ ಜೆಎಂಎಂ -29, ಕಾಂಗ್ರೆಸ್‌ -16, ಆರ್‌ಜೆಡಿ-1 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ನಡೆಸುತ್ತಿದೆ. 41 ಸ್ಥಾನಗಳನ್ನು ಪಡೆದವರು ಸರ್ಕಾರ ರಚಿಸಬಹುದಾಗಿದೆ. ಬಿಜೆಪಿಪಿ 32 ಸ್ಥಾನಗಳನ್ನು ಹೊಂದಿದ್ದು, ಕೇವಲ 9 ಸ್ಥಾನ ಕಡಿಮೆ ಇರುವುದರಿಂದ ಕಾಂಗ್ರೆಸ್‌ ಮತ್ತು ಜೆಎಂಎಂ‌ಗೆ ಆಪರೇಷನ್‌ ಭೀತಿ ಎದುರಾಗಿದೆ.



Join Whatsapp