ದಾವಣಗೆರೆ: ಮುಂದಿನ ಬಜೆಟ್ ನಲ್ಲೇ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಿಂದ ಬಡವರಿಗೆ ಸಹಾಯ ಆಗುತ್ತದೆ ಎಂಬುದನ್ನ ಅರಿತು ಬರೆಯಿರಿ. ನಾನು ಹೇಳಿದೆ ಎಂದು ಬರೆಯಬೇಡಿ. ಗಂಡಾ-ಹೆಂಡತಿ ಜಗಳ ಉಂಡ ಮಲಗುವ ತನಕ. ಆರೋಪ ಪ್ರತ್ಯಾರೋಪ ಸಾಮಾನ್ಯ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಾರದು. ಅದಕ್ಕೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ. ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಾಗ ಮಾತ್ರ ವೈಚಾರಿಕೆ ಬೆಳೆಯಲು ಸಾಧ್ಯ ಎಂದರು.
ದೇಶದಲ್ಲಿ ಎಲ್ಲ ವರ್ಗದ ಜನ ಇದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೀಸಲಾತಿ ಬಂದಿದೆ. ಎಲ್ಲ ವರ್ಗದ ಕಲ್ಯಾಣ ಆಗಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕಾಗಿದ್ದು ನಮ್ಮ ಪತ್ರಕರ್ತನ ಜವಾಬ್ದಾರಿ. ಮಾಧ್ಯಮಗಳು ಯಾವುದೇ ಕಾರಣಕ್ಕೂ ಮೌಢ್ಯಗಳನ್ನ ಬೆಂಬಲಿಸಬಾರದು. ನಾನು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಕಾರ್ ಮೇಲೆ ಕಾಗೆ ಕುಳಿತ್ತಿತ್ತು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಗಿತ್ತು. ಚಾಮರಾಜನಗರಕ್ಕೆ ಹೋದರೆ ಸಿಎಂ ಹುದ್ದೆ ಹೋಗುತ್ತದೆ ಅಂದ್ದರು. ನಾನು 12 ಸಲ ಚಾಮರಾಜನಗರಕ್ಕೆ ಹೋಗಿದ್ದೆ. ಐದು ವರ್ಷ ಸಿಎಂ ಆಗಿದೆ. ಮತ್ತೆ ಸಿಎಂ ಆಗಿದ್ದೇನೆ ಎಂದರು.