ಕೇರಳ | ರಂಜಿತ್ ಕೊಲೆ ಕೇಸ್; ನ್ಯಾಯಾಧೀಶೆಗೆ ಬೆದರಿಕೆ ಆರೋಪ: ನಾಲ್ವರ ಬಂಧನ

Prasthutha|

ಅಲಪ್ಪುಳ: ಬಿಜೆಪಿಯ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ ನಂತರ ನ್ಯಾಯಾಧೀಶೆಗೆ ವಿವಿಧ ಸಾಮಾಜಿಕ ವೇದಿಕೆಗಳಲ್ಲಿ ಬೆದರಿಕೆ ಒಡ್ಡಿದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

- Advertisement -


ನಸೀರ್ ಮಾನ್(47), ರಫಿ(38), ನವಾಸ್ ನೈನಾ(42) ಹಾಗೂ ಶಾಜಹಾನ್(36) ಬಂಧಿತರು.


ಇದರ ಬೆನ್ನಲ್ಲೇ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

- Advertisement -


ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.



Join Whatsapp