ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ನೇಮ್ ಬೋರ್ಡ್ ಹಾಕಿಸಿಕೊಳ್ಳಲು ವಾಹನ ಸವಾರರಿಗೆ ಡೆಡ್ಲೈನ್ ಮುಗಿಯಲು ಹದಿನೈದು ದಿನಗಳಷ್ಟೇ ಬಾಕಿ ಇದೆ. 2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಹಾಕಿಸಿಕೊಳ್ಳುವಂತೆ ನೀಡಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಫೆ.17 ರಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ಫಿಕ್ಸ್. ಮೊದಲನೆ ಬಾರಿ ಸಿಕ್ಕಿಬಿದ್ದರೆ ಸಾವಿರ, 2ನೇ ಬಾರಿ ಸಿಕ್ಕಿಬಿದ್ದರೆ 2 ಸಾವಿರ ದಂಡ ಹಾಕಲಾಗುತ್ತೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು. ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದಿವೆ.
ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು. ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 16 ದಿನಗಳಷ್ಟೇ ಬಾಕಿ ಉಳಿದಿವೆ.