ನವದೆಹಲಿ: ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು. ಇದು ಐತಿಹಾಸಿಕ ಬಜೆಟ್ ಆಗಿದ್ದು, ಯುವಕರು, ಮಹಿಳೆಯರು, ಬಡವರು, ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಬಜೆಟ್ ಎಲ್ಲರ ಅಭಿವೃದ್ಧಿ ಮಾಡಲಿದೆ, ಬಜೆಟ್ ನಲ್ಲಿ ಎಲ್ಲ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.