ಶಾಂತಿಪ್ರಿಯ ಮಂಡ್ಯ ಜನರಿಗೆ ಫೆ. 9ರ ಬಂದ್ ಬೇಕಿಲ್ಲ: ಚಲುವರಾಯಸ್ವಾಮಿ

Prasthutha|

ಮಂಡ್ಯ: ಮಂಡ್ಯದ ಜನರಿಗೆ ರಾಜಕೀಯ ಪಕ್ಷಗಳ ಬಗ್ಗೆ ತಮ್ಮದೇ ಆದ ಒಲವು, ಪ್ರೀತಿ ಮತ್ತು ಅಭಿಮಾನ ಇದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಂಡ್ಯ ಬಂದ್ ಗೆ ಕರೆಕೊಟ್ಟಿರುವುದು ಇಷ್ಟವಿಲ್ಲ, ಬಂದ್ ಬೇಡ ಅಂತ ಜನಸಾಮಾನ್ಯರು ಹೇಳುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡು ಹನುಮ ಧ್ವಜ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮಾಡುತ್ತಿದ್ದಾರೆ, ಆದರೆ ಅವರ ಆಟ ಜನ ನಡೆಲು ಜನ ಬಿಡಲ್ಲ ಎಂದು ಹೇಳಿದರು.


ಜಿಲ್ಲಾಡಳಿತ ಸಭೆಯೊಂದನ್ನು ಆಯೋಜಿಸಿ ಕೆರಗೋಡು ಜನರೊಂದಿಗೆ ಚರ್ಚೆ ನಡೆಸಲಿದ್ದು, ಅವರು ಬೇಕು ಬೇಡಗಳಿಗೆ ಮನ್ನಣೆ ನೀಡಲಿದೆ, ಹಾಗಾಗಿ ಪ್ರಕರಣಕ್ಕೆ ರಾಜಕೀಯ ಲೇಪ ನೀಡುವ ಕಾರ್ಯಕ್ಕೆ ಯಾರೂ ಇಳಿಯಬಾರದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.



Join Whatsapp