ಕಾಸರಗೋಡು: 7 ಮಂದಿ ವಿರುದ್ಧ ಹನಿ ಟ್ರ್ಯಾಪ್ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯೊಬ್ಬರನ್ನು ಬಳಸಿ ಹನಿ ಟ್ರ್ಯಾಪ್ ಮಾಡಿದ ಆರೋಪದಲ್ಲಿ ದಿಲ್ಷಾದ್, ಸಿದ್ದೀಕ್, ಲುಬ್ನಾ, ಫೈಝಲ್ ಸಹಿತ 7 ಮಂದಿ ಆರೋಪಿಗಳ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ವಸತಿ ಗೃಹವೊಂದರಲ್ಲಿ ಲುಬ್ನಾ ಎಂಬಾಕೆಯ ಜೊತೆ ತನ್ನ ಫೋಟೊ ತೆಗೆದು, ಬೆದರಿಸಿ 5 ಲಕ್ಷ ರೂ. ಸುಲಿಗೆ ಮಾಡಿರುವುದಾಗಿ ಮಾಂಗಾಡ್ ನಿವಾಸಿ 59 ವರ್ಷದ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದರು.