ನವದೆಹಲಿ: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡುವುದನ್ನು ಮೊದಲಿನಿಂದಲೂ ವಿರೋಧಿಸಿದ್ದೆ ಆದರೆ ಯಾರೂ ನನ್ನ ಅಭಿಪ್ರಾಯಕ್ಕೆ ಕಿವಿಗೊಡಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ನಾನು ಬೇರೆ ಹೆಸರನ್ನು ಸೂಚಿಸಿದ್ದೆ ಆದರೆ ಅವರು ಇಂಡಿಯಾ ಅಲೈಯನ್ಸ್ ಹೆಸರನ್ನು ಇಟ್ಟುಕೊಂಡಿದ್ದಾರೆ.
ಇಂಡಿಯಾ ಮೈತ್ರಿಯಲ್ಲಿ ಏನಾಗುತ್ತಿದೆ ಎಂಬುದನ್ನು ಈಗ ನೀವು ನೋಡಬಹುದು. ಅಷ್ಟೇ ಅಲ್ಲ, ಈಗ ತಮ್ಮ ಹಳೆಯ ಪಾಲುದಾರರೊಂದಿಗೆ (ಬಿಜೆಪಿ) ಬಂದಿದ್ದು, ಸದಾ ಅವರೊಂದಿಗೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.