ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ರಾಜ್ಯಪಾಲರು ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆಗೆ ಸಹಿ ಹಾಕಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

- Advertisement -

ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆ ರಾಜ್ಯಪಾಲರು ವಾಪಸ್ ಕಳಿಸಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅಧಿವೇಶನ ಘೋಷಣೆ ಮಾಡುವ ಮುಂಚೆ ಸುಗ್ರೀವಾಜ್ಞೆ ಮಾಡಿದ್ದೆವು. ದೇಶದ ರಕ್ಷಣೆ ವಿಚಾರ ಹೇಗೆ ಕಾಪಾಡುತ್ತೇವೋ ಅದೇ ರೀತಿ ರಾಜ್ಯದ ಗೌರದ ವಿಚಾರ ಇದು. ನಾವು ಅದಕ್ಕೆ 60% ಕನ್ನಡ ಇರಬೇಕು ಎಂದು, ಯಾವುದೇ ಗೊಂದಲ ಇರಬಾರದು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೆವು. ಅಸ್ಮಿತೆ, ಸ್ವಾಭಿಮಾನ, ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅ ದೃಷ್ಟಿಯಿಂದ ಗಲಾಟೆ, ಚಳವಳಿ ನಡೆಯುತ್ತಿತ್ತು. ಹೀಗಾಗಿ ಕನ್ನಡ
ಕಡ್ಡಾಯ ಎಂದು ಮಾಡಿದ್ದೇವೆ ಎಂದರು.



Join Whatsapp