ಶೆಟ್ಟರ್ ನಿರ್ಗಮನದಿಂದ ತೆರವಾದ MLC ಸ್ಥಾನ ಮುಸ್ಲಿಮರಿಗೆ ನೀಡುವಂತೆ ಆಗ್ರಹ

Prasthutha|

►ನಿಷ್ಠರಿಗೆ ನೀಡುವುದಾದರೆ ಇನಾಯತ್ ಅಲಿ ಅಥವಾ ಸುಹೈಲ್ ಕಂದಕ್‌‌ಗೆ ಅವಕಾಶ ನೀಡುವಂತೆ ಬೆಂಬಲಿಗರ ಮನವಿ

- Advertisement -

ಮಂಗಳೂರು: ಜಗದೀಶ್ ಶೆಟ್ಟರ್ ಅವರ ಪಕ್ಷಾಂತರ ಮತ್ತು ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ ಸ್ಥಾನವನ್ನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಥಾನವನ್ನು ಪಕ್ಷ ನಿಷ್ಟರಾದ ಮುಸ್ಲಿಂ ಸಮುದಾಯದವರಿಗೆ ನೀಡುವಂತೆ ಆಗ್ರಹಗಳು ಕೇಳಿ ಬರುತ್ತದೆ.
ಪಕ್ಷ ನಿಷ್ಠ ನಾಯಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಯುವ ಮುಖಂಡ ಸುಹೈಲ್ ಕಂದಕ್ ಅವರಿಗೆ ಅವಕಾಶ ಕಲ್ಪಿಸುವಂತೆ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.

ಇನಾಯತ್ ಅಲಿ ಅವರು‌ ಹತ್ತಾರು ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದು, ಪಕ್ಷದ ತತ್ವ ಸಿದ್ಧಾಂತಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಜನಸೇವೆ ಮತ್ತು ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇನಾಯತ್ ಅಲಿ ಅವರಿಗೆ ಶೆಟ್ಟರ್ ಅವರಿಂದ ತೆರವಾದ ಪರಿಷತ್‌ ಸ್ಥಾನ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದಾರೆ.

- Advertisement -

Make A Change ಪೌಂಡೇಶನ್ ಸ್ಥಾಪಿಸಿ ಅದರ ಮೂಲಕ ಕೊರೋನಾ ವೇಳೆ ಸೇವೆ ಮಾಡಿರುವ ಕಾಂಗ್ರೆಸ್ ಯುವ ಮುಖಂಡ ಸುಹೈಲ್ ಕಂದಕ್ ಅವರಿಗೂ ಅವಕಾಶ ನೀಡುವಂತೆ ಆಗ್ರಹ ಕೇಳಿ ಬಂದಿದೆ.

ಈ ಇಬ್ಬರಿಗೆ ಪರಿಷತ್‌ನಲ್ಲಿ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ
ದೊಡ್ಡ ಮಟ್ಟದಲ್ಲಿ ಆಗ್ರಹಗಳು ಕೇಳಿಬರುತ್ತಿದೆ.



Join Whatsapp