ಕಾರನ್ನು ಮೆಟ್ಟಿಲ ಮಧ್ಯೆ ತಂದು ನಿಲ್ಲಿಸಿದ ಗೂಗಲ್ ಮ್ಯಾಪ್: ಚಾಲಕನ ಪರದಾಟ

Prasthutha|

ಚೆನ್ನೈ: ಗೂಗಲ್​ ಮ್ಯಾಪ್​‌ನ್ನು ಪೂರ್ತಿ ನಂಬಿದರೆ ಏನಾಗಬಹುದು ಎಂಬುದಕ್ಕೆ ಉದಾಹರಣೆ ಎಂಬಂತಹ ಘಟನೆಯೊಂದು ತಮಿಳುನಾಡಿನಲ್ಲಿ‌ ನಡೆದಿದ್ದು, ಕಾರು ಚಾಲಕ ಪರದಾಡುವಂತಾಗಿದೆ.

- Advertisement -

ಗೂಗಲ್​ ಮ್ಯಾಪ್​ ಸೂಚಿಸಿದ ವೇಗದ ಮಾರ್ಗವನ್ನು ಅನುಸರಿಸಲು ಹೋಗಿ ಎಸ್​ಯುವಿ ಕಾರೊಂದು ರಸ್ತೆಯನ್ನು ಬಿಟ್ಟು ಮೆಟ್ಟಿಲುಗಳ ನಡುವೆ ಸಿಲುಕಿ ಕಾರು ಚಾಲಕ ಪರದಾಡಿದ ಈ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ತಾಲೂಕಿನಲ್ಲಿ ನಡೆದಿದೆ.

ಕರ್ನಾಟಕ ವ್ಯಕ್ತಿಯೊಬ್ಬರು ವಾರಾಂತ್ಯವನ್ನ ಮುಗಿಸಿ, ಗುಡಲೂರಿನಿಂದ ಕರ್ನಾಟಕಕ್ಕೆ ವಾಪಸಾಗುತ್ತಿದ್ದಾಗ ಇದು ಘಟಿಸಿದೆ. ಗುಡಲೂರಿನಿಂದ ಕರ್ನಾಟಕಕ್ಕೆ ಹೊರಟ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ನಿರ್ದೇಶನದಂತೆ ವೇಗದ ಮಾರ್ಗಕ್ಕಾಗಿ ಗೂಗಲ್​ ಮ್ಯಾಪ್ ಅನುಸರಿಸಿದ್ದಾರೆ. ​

- Advertisement -

ಆದರೆ, ಮ್ಯಾಪ್​ ಸೂಚಿಸಿದ ಮಾರ್ಗವು ವಸತಿ ಪ್ರದೇಶದಲ್ಲಿ ಮೆಟ್ಟಿಲುಗಳ ಕಡಿದಾದ ಇಳಿಜಾರಿನಲ್ಲಿ ಸಿಲುಕುವಂತೆ ಮಾಡಿದೆ. ಇದರಿಂದ ಆತಂಕಕ್ಕೆ ಒಳಗಾದ ವ್ಯಕ್ತಿ, ಕಾರನ್ನು ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಸಹಾಯಕ್ಕಾಗಿ ಬೆರೆಯವರನ್ನು ಕರೆದಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ಪೋಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ, ಎಸ್‌ಯುವಿಯನ್ನು ಮುಖ್ಯ ರಸ್ತೆಗೆ ಹಿಂದಿರುಗಿಸಲು ಸಹಾಯ ಮಾಡಿದ್ದಾರೆ. ಬಳಿಕ ವ್ಯಕ್ತಿ ಕರ್ನಾಟಕಕ್ಕೆ ತಮ್ಮ ಪ್ರಯಾಣವನ್ನು ಪುನರಾರಂಭಿಸಿದ್ದಾರೆ.



Join Whatsapp