ಕಪ್ಪು ಬಾವುಟ ಪ್ರದರ್ಶನ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗೆ Z+ ಭದ್ರತೆ

Prasthutha|

ತಿರುವನಂತಪುರಂ: ಕೊಲ್ಲಂ ಜಿಲ್ಲೆಯಲ್ಲಿ ಎಸ್ ಎಫ್ ಐ ಕಾರ್ಯಕರ್ತರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದು, ಈ ಹಿನ್ನೆಲೆ
ಖಾನ್, ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರ, ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ್ದರು. ಈ ಪ್ರತಿಭಟನೆ- ಆಕ್ರೋಶ ನಂತರ ಕೇಂದ್ರ ಸರ್ಕಾರ ಖಾನ್ ಅವರಿಗೆ Z+ ಭದ್ರತೆಯನ್ನು ನೀಡಿದೆ.

- Advertisement -


“ಗೌರವಾನ್ವಿತ ಗವರ್ನರ್ ಮತ್ತು ಕೇರಳ ರಾಜಭವನಕ್ಕೆ ಸಿಆರ್ಪಿಎಫ್ನ Z+ ಭದ್ರತೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕೇರಳ ರಾಜಭವನಕ್ಕೆ ತಿಳಿಸಿದೆ” ಎಂದು ರಾಜ್ಯಪಾಲರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗವರ್ನರ್ ಖಾನ್ ತೆರಳುತ್ತಿದ್ದಾಗ ಎಸ್ ಎಫ್ ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.



Join Whatsapp