ಬಿಗಿ ಭದ್ರತೆ ನಡುವೆಯೂ ಸಿಎಂ ಕಡೆಗೆ ನುಗ್ಗಲು ಯತ್ನ: ಗಮನ ಸೆಳೆಯಲು ಎಂದ ಬಂಧಿತ

Prasthutha|

ಬೆಂಗಳೂರು: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವ ಪೊಲೀಸರ ಬಿಗಿ ಭದ್ರತೆ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗೆ ಕರಪತ್ರ ಹಿಡಿದು ನುಗ್ಗಲು ಯತ್ನಿಸಿದ ಘಟನೆ ನಡೆದಿತ್ತು. ಮೈಸೂರು ಮೂಲತದ ಪರಶುರಾಮ್ (62) ಎಂಬಾತ ಹೀಗೆ ಮಾಡಿ ಪೊಲೀಸರಿಂದ ಸೆರೆಯಾಗಿದ್ದಾನೆ. ಗಮನ ಸೆಳೆಯಲು ಹೀಗೆ ಮಾಡಿದ್ದೆಂದು ಆತ ಹೇಳಿದ್ದಾನೆ.

- Advertisement -

ಮೈಸೂರಿನಲ್ಲಿ ಸ್ಥಳೀಯ ಪತ್ರಿಕೆ ನಡೆಸುತ್ತಿರುವ ಪರಶುರಾಮ್ ಪತ್ರಿಕೆ ಹೆಸರು ಹೇಳಿ ಪಾಸ್ ಪಡೆದಿದ್ದನು. ಶುಕ್ರವಾರ ಮುಂಜಾನೆ ಮೈಸೂರಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು ಮಣಿಕ್ ಷಾ ಮೈದಾನಕ್ಕೆ ಆಗಮಿಸಿದ್ದನು.

ಗೇಟ್ ಸಂಖ್ಯೆ2ರಲ್ಲಿ ಭದ್ರತಾ ಸಿಬ್ಬಂದಿಗೆ ಮಾಧ್ಯಮದ ಪಾಸ್ ತೋರಿಸಿ ಮೈದಾನದ ಒಳಗೆ ಪ್ರವೇಶ ಕೊಟ್ಟಿದ್ದ ಪರಶುರಾಮ್. ಮಾಧ್ಯಮ ಸಿಬ್ಬಂದಿಗೆ ನಿಗದಿಪಡಿಸಿರುವ ಜಾಗದಲ್ಲಿ ನಿಂತಿದ್ದನು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಮಾಧ್ಯಮದ ಗ್ಯಾಲರಿಯಿಂದ ಏಕಾಏಕಿ ಮೈದಾನಕ್ಕೆ ಓಡಿ ಹೋಗಿ ಕೈಮುಗಿದುಕೊಂಡು ಮುಖ್ಯಮಂತ್ರಿ ಸಿದ್ದರಾಮ್ಯರ ಬಳಿ ತೆರಳಲು ಮುಂದಾಗಿದ್ದನು.

- Advertisement -

ಭದ್ರತಾ ಸಿಬ್ಬಂದಿ, ತಕ್ಷಣ ಆತನನ್ನು ವಶಕ್ಕೆ ಪಡೆದು ಕರೆದೊಯ್ಯಲು ಮುಂದಾದರು. ಇಷ್ಟಕ್ಕೂ ಸುಮ್ಮನಾಗದ ಈತ ಪೊಲೀಸರಿಂದ ಬಿಡಿಸಿಕೊಳ್ಳಲು ಯತ್ನಿಸಿ ‘ಕೆಪಿಎಸ್‌ಸ್ಸಿಯಲ್ಲಿ ನನಗೆ ಅನ್ಯಾಯ ಆಗಿರುವುದನ್ನು ಸರಿಪಡಿಸಿ’ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಥಾವರ್ ಚಂದ್ ಗೆಹಲೋತ್ ಕಡೆ ಪೋಸ್ಟರ್ ಎಸೆದು ಕಣ್ಣೀರು ಹಾಕಿದ್ದನು. ಪೊಲೀಸರು ಪರಶುರಾಮ್‌ನನ್ನು ಮಣಿಕ್ ಷಾ ಮೈದಾನದಿಂದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.



Join Whatsapp