ಬಿಜೆಪಿಗೆ ವಾಪಸ್ ಬರಲು ಅಯೋಧ್ಯೆ ರಾಮಮಂದಿರ ಪ್ರೇರಣೆಯಾಯಿತು: ಜಗದೀಶ್ ಶೆಟ್ಟರ್

Prasthutha|

ಬೆಂಗಳೂರು: ಬಿಜೆಪಿಗೆ ವಾಪಸ್ ಬರಲು ಅಯೋಧ್ಯೆ ರಾಮಮಂದಿರ ಪ್ರೇರಣೆಯಾಯಿತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

- Advertisement -


ಕೇವಲ ಒಂಬತ್ತು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಬಂದು ಬಿಜೆಪಿಗೆ ವಾಪಸ್ಸು ಹೋದ ಜಗದೀಶ್ ಶೆಟ್ಟರ್ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.


ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದು ಒಂದು ಪ್ರೇರಣೆಯಾಯಿತು. ಘರ್ ವಾಪ್ಸಿ ಪ್ರಕ್ರಿಯೆ ಕಳೆದ 5-6 ತಿಂಗಳಿಂದ ಜಾರಿಯಲ್ಲಿತ್ತು ಎಂದರು.
1992 ರಲ್ಲಿ ಎಲ್ ಕೆ ಅಡ್ವಾಣಿ ಅವರ ರಥಯಾತ್ರೆ ಹುಬ್ಬಳ್ಳಿಗೆ ಆಗಮಿಸಿದಾಗ ಒಂದು ದೊಡ್ಡ ಸಾರ್ವಜನಿಕ ಸಭೆಯನ್ನು ಆಯೋಜಿಸಿ ಅದಕ್ಕೆ ಎಲ್ಲ ಏರ್ಪಾಟುಗಳನ್ನು ಮಾಡಿದ್ದು ತಾನೇ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಅಲ್ಲದೆ ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿಯಿಂದ 2 ಕೋಟಿ ರೂ. ಗಿಂತ ಹೆಚ್ಚು ಹಣ ಸಂಗ್ರಹಿಸಿ ಕೊಟ್ಟಿದ್ದನ್ನು ಶೆಟ್ಟರ್ ಹೇಳಿದರು.

- Advertisement -


ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ, ದೇಶಕ್ಕೆ ಈಗ ಅವರಂಥ ನಾಯಕ ಅವಶ್ಯಕತೆಯಿದೆ ಎಂದು ಶೆಟ್ಟರ್ ಹೇಳಿದರು. ತಾನು ಬಿಜೆಪಿಗೆ ವಾಪಸ್ಸು ಬರಲು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಹತ್ವದ ಪಾತ್ರ ನಿರ್ವಹಿಸಿರುವರೆಂದು ಶೆಟ್ಟರ್ ಹೇಳಿದರು.

Join Whatsapp