ಬೆಂಗಳೂರು: ವಿಧಾನ ಪರಿಷತ್ತಿಗೆ ಸಂವಿಧಾನದ ಮೂಲ ಆಶಯದಂತೆ ಸಾಮಾಜಿಕ ಹೊಣೆಗಾರಿಕೆಯುಳ್ಳ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪರಿಗಣಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಚಿಂತಕರ ಚಾವಡಿ, ಮೇಲ್ಮನೆ ಮತ್ತು ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್ ತನ್ನದೇ ಆದ ಘನತೆ ಹಾಗೂ ಹಿರಿಮೆ ಹೊಂದಿದ್ದು, ಇತ್ತೀಚೆಗೆ ಶಾಸಕರಲ್ಲಿ ಸಹ ಅಧ್ಯಯನ ಶೀಲ ಮನೋಭಾವ ಕಡಿಮೆ ಆಗುತ್ತಿದ್ದು, ಗುಣಾತ್ಮಕ ಚರ್ಚೆಗಳಲ್ಲಿ ಭಾಗವಹಿಸುವ ಉತ್ಸಾಹ ಕುಂಟಿತವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.