ಬಂಟ್ವಾಳ: ಅಲಾಡಿ ಕೊಪ್ಪಳದ ಶಂಸುಲ್ ಉಲಮಾ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ ಸಮಾರಂಭ ನಡೆಯಿತು. ಗುರುಗಳಾದ ಹಾರಿಸ್ ಹನೀಫಿ ಧ್ವಜಾರೋಹನಗೈದರು. ನಂತರ ಮಾತನಾಡಿದ ಅವರು, ಡಾ| ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಪ್ರಕಾರ ಸ್ವತಂತ್ರ ಗಣರಾಜ್ಯವಾಗಿ ಅಸ್ತಿತ್ವ ಪಡೆದ ಭವ್ಯ ಜಾತ್ಯತೀತ ಭಾರತ ದೇಶವು ಸುಂದರವಾದ ತತ್ವ ಮೀಮಾಂಸೆಯ, ಮಹಾನ್ ಸಾಧಕರ ಅನುಗ್ರಹೀತ ದೇಶವಾಗಿದೆ ಎಂದರು.
ಭಾರತದ ಮಹೋನ್ನತ ಸಂವಿಧಾನದ ಆಶಯ ಪ್ರಕಾರ ಹಿಂದೂ ಮುಸ್ಲಿಂ ಕ್ರೈಸ್ತ ಸಹಿತ ಎಲ್ಲಾ ಸಮುದಾಯ ಬಾಂಧವರು ಶಾಂತಿ ಸೌಹಾರ್ದತೆಯ ಸಹಬಾಳ್ವೆ ನಡೆಸಿದಾಗ ಸಂವಿಧಾನದ ನಿಜವಾದ ಆಶಯ ಈಡೇರುತ್ತದೆ ಎಂದರು.
ಈ ಸಂಧರ್ಭದಲ್ಲಿ ಸ್ಥಳೀಯ ಅಧ್ಯಾಪಕರಾದ ಸಿದ್ದೀಖ್ ಹನೀಫಿ ಸಹಿತ ಇತರರು ಭಾಗವಹಿಸಿದ್ದರು.