ಮಂಗಳೂರು | ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ವಿವಾದ ಮಾಡಿದರು, ಇದಕ್ಕೆಲ್ಲಾ ಹೆದರುವುದಿಲ್ಲ: ಡಿ.ಕೆ.ಶಿವಕುಮಾರ್

Prasthutha|

‘ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ’

- Advertisement -

ಮಂಗಳೂರು: ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ಟೀಕೆ, ವಿವಾದ ಮಾಡಿದರು. ಆದರೆ ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ‌.

ಮಂಗಳೂರಿನ ಹೊರವಲಯದ ಕಣ್ಣೂರು ನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ ವೈಎಸ್​ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೀವು ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ ಗೆ ಅಲ್ಲ, ಸರ್ಕಾರಕ್ಕೆ. ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ ಎಂದು ಹೇಳಿದ್ದಾರೆ.

- Advertisement -

ನಾವು ನಿಮ್ಮ ಜೊತೆ ಇದ್ದು, ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ನಾನು ಕನಕಪುರದ ಬಂಡೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.

ರಾಮಮಂದಿರ ಮಂತ್ರಾಕ್ಷತೆ ಮಂತ್ರಾಕ್ಷತೆ ಅಕ್ಕಿ ಸಿಎಂ ಸಿದ್ದರಾಮಯ್ಯ ಕೊಟ್ಟ ಅಕ್ಕಿ. ಐದು ಗ್ಯಾರಂಟಿಗಳೇ ಕಾಂಗ್ರೆಸ್ ಕೊಟ್ಟ ಮಂತ್ರಾಕ್ಷತೆ ಎಂದು ಹೇಳಿದ್ದಾರೆ.



Join Whatsapp