ಮೈಸೂರು : ಮೈಸೂರಿನಲ್ಲಿ ಘೋರ ಕೃತ್ಯ ವರದಿಯಾಗಿದ್ದು, ಹೆತ್ತ ತಾಯಿ, ಸಹೋದರಿಯನ್ನು ಕರೆಗೆ ತಳ್ಳಿ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಘಟನೆ ನಡೆದಿದ್ದು, ಸಹೋದರಿಯ ಪ್ರೀತಿಗೆ ವಿರೋಧಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಅನಿತಾ (43), ಧನುಶ್ರೀ (19) ಮೃತರು. ನಿತಿನ್ ಕೊಲೆ ಆರೋಪಿ. ಸ್ವಂತ ತಾಯಿ ಮತ್ತು ಸೋದರಿಯನ್ನು ಮರೂರಿನ ಕೆರೆಯಲ್ಲಿ ತಳ್ಳಿ ನಿತಿನ್ ಹತ್ಯೆ ಮಾಡಿದ್ದು, ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹವನ್ನು ಕೆರೆಯಿಂದ ಹೊರಗೆ ತಂದಿದ್ದಾರೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.