900ಕ್ಕೂ ಹೆಚ್ಚು PSI ಹುದ್ದೆಗೆ ಶೀಘ್ರವೇ ನೇಮಕಾತಿ: ಪರಮೇಶ್ವರ್

Prasthutha|

ಬೆಂಗಳೂರು: ಶೀಘ್ರವೇ 403+ 660 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI ) ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರು ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

- Advertisement -


ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳಿಂದ ನಿರೀಕ್ಷೆ ಮಾಡಿದ್ದ PSI ಪರೀಕ್ಷೆ ಯಶಸ್ವಿಯಾಗಿ, ಸುಗಮವಾಗಿ ನಡೆದಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ಆಗಿಲ್ಲ. ಅಭ್ಯರ್ಥಿಗಳಿಗೆ ಯಾವುದೇ ಬ್ಲೂಟೂತ್ ಕೂಡಾ ತರಲು ಸಾಧ್ಯವಾಗಿಲ್ಲ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದರು. ಇದರಲ್ಲಿ 65% ರಿಂದ 70% ಹಾಜರಾತಿ ಇತ್ತು. ಆದಷ್ಟು ಮೌಲ್ಯಮಾಪನ ಮಾಡಿ ರಿಸಲ್ಟ್ ಕೊಟ್ಟು ನೇಮಕಾತಿ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದಿದ್ದಾರೆ.


ಮುಂದಿನ ಹಂತದಲ್ಲಿ 403 ಜನ PSI ನೇಮಕಾತಿಗೂ ಪರೀಕ್ಷೆ ಮಾಡುತ್ತೇವೆ. ಅದನ್ನು ಕೂಡಾ KEA ಮೂಲಕವೇ ಪರೀಕ್ಷೆ ನಡೆಸುತ್ತೇವೆ. PSI ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದಕ್ಕೆ KEA ಮತ್ತು ಅದರ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



Join Whatsapp