ತುಮಕೂರು: ಬಂಡೆ ಉರುಳಿ ಇಬ್ಬರು ಮೃತ್ಯು

Prasthutha|

ತುಮಕೂರು: ತಾಲ್ಲೂಕಿನ ಕೌತಮಾರನಹಳ್ಳಿ ಬಳಿ ಕರ್ನಾಟಕ ಜಲ್ಲಿ ಕ್ರಷರ್‌ ಘಟಕದಲ್ಲಿ ಅವಘಡ ಸಂಭವಿಸಿದ್ದು, ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕಲ್ಲು ಬಂಡೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರ ಕಾಲು ಮುರಿದಿದೆ.

- Advertisement -

ಮಂಗಳವಾರ ಮಧ್ಯಾಹ್ನ ಕಲ್ಲು ಬಂಡೆಯನ್ನು ಸೀಳುತ್ತಿದ್ದ ಸಮಯದಲ್ಲಿ ಬಂಡೆ ಉರುಳಿ ಬಿದ್ದಿದೆ. ಕಲ್ಲು ಬಂಡೆ ಮೇಲೆ ನಿಂತು ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಲ್ಲಿನ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29), ಛತ್ತೀಸಗಡ ಮೂಲದ ಮನು (25) ಮೃತರು. ಈರ ಎಂಬುವರು ಕಾಲು‌ಮರಿತಕ್ಕೊಳಗಾದವರು. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಕ್ರಷರ್ ಮಾಲೀಕ ತಲೆ ಮರೆಸಿಕೊಂಡಿದ್ದಾರೆ. ಕ್ಯಾತ್ಸಂದ್ರ ‍ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp