ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ; ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ: ಕೆ ಎಸ್ ಈಶ್ವರಪ್ಪ

Prasthutha|

ಶಿವಮೊಗ್ಗ: ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ ಬಳಿಕ ಮಾತನಾಡುತ್ತಾ ಜೈ ಶ್ರೀರಾಮ್ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೀರೋ‌ ಆಗಿದ್ದಾರೆ. ಕರ್ನಾಟಕದ ಜನರ ಮುಂದೆ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ ಎಂದರು.

ಎಲ್ಲಾ ಮುಗಿದ ಮೇಲೆ ಈಗ ಜೈ ಶ್ರೀರಾಮ್ ಅಂತಾ ಕೂಗಿದ್ದಾರೆ. ಕೊನೆಗೂ ಅವರಿಗೆ ರಾಮ ಬುದ್ಧಿ ಕೊಟ್ನಲ್ಲ ಅಂತಾ ಸಂತಸವಾಗಿದೆ. ಜೈ ಶ್ರೀರಾಮ್ ಬಿಜೆಪಿ ಆಸ್ತಿ ಅಲ್ಲ, ಪ್ರಪಂಚದ ಹಿಂದೂಗಳ ಆಸ್ತಿ. ಬರೀ ಮುಸಲ್ಮಾನರನ್ನೇ ಇಟ್ಟುಕೊಂಡರೆ ಬದುಕುವುದಕ್ಕೆ ಆಗಲ್ಲ. ಹಿಂದೂಗಳು ಕೂಡ ಬೇಕು ಅಂತಾ ಕೊನೆಗೂ ಸಿದ್ದರಾಮಯ್ಯಗೆ ಬುದ್ಧಿ ಬಂದಿದೆ. ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳ್ಳೆಯದು ಮಾಡಲಿ ಎಂದರು.



Join Whatsapp