ಹಮಾಸ್ ಮುಂದಿರಿಸಿದ ಷರತ್ತುಗಳನ್ನು ತಿರಸ್ಕರಿಸಿದ ಇಸ್ರೇಲ್

Prasthutha|

ಟೆಲ್‍ಅವೀವ್: ಗಾಝಾದಿಂದ ಇಸ್ರೇಲ್ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದರೆ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಎಂದು ಹಮಾಸ್ ಮುಂದಿರಿಸಿದ ಷರತ್ತುಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ.

- Advertisement -

ನಮ್ಮ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಹಮಾಸ್, ಯುದ್ಧವನ್ನು ಅಂತ್ಯಗೊಳಿಸಲು, ಗಾಝಾದಿಂದ ನಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು, ಬಂಧಿತ ಪ್ಯಾಲೆಸ್ತೀನಿಗಳನ್ನು ಇಸ್ರೇಲ್ ಜೈಲಿಂದ ಬಿಡುಗಡೆಗೊಳಲು ಷರತ್ತು ವಿಧಿಸಿದೆ. ಆದರೆ ಈ ಷರತ್ತನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ನೆತನ್ಯಾಹು ಘೋಷಿಸಿದ್ದಾರೆ.

ಹಮಾಸ್‍ನ ಬಳಿ ಸುಮಾರು 240 ಒತ್ತೆಯಾಳುಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರಲ್ಲಿ 100ಕ್ಕೂ ಅಧಿಕ ಒತ್ತೆಯಾಳುಗಳನ್ನು ನವೆಂಬರ್ ಅಂತ್ಯದಲ್ಲಿ ಬಿಡುಗಡೆಗೊಳಿಸಲಾಗಿದೆ. ಪ್ರತಿಯಾಗಿ ಇಸ್ರೇಲ್‍ನ ಜೈಲಿನಿಂದ 240 ಫೆಲೆಸ್ತೀನೀಯರನ್ನು ಬಿಡುಗಡೆಗೊಳಿಸಲಾಗಿದೆ. ಬಳಿಕ ಕದನ ಮುಂದುವರೆದಿದ್ದು, ಉಳಿದ 136 ಒತ್ತೆಯಾಳುಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೆತನ್ಯಾಹು ಸರಕಾರದ ಮೇಲೆ ಒತ್ತೆಯಾಳುಗಳ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ‌. ದೇಶದಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದೆ.

- Advertisement -

ಈ ಮಧ್ಯೆ, ನನ್ನ ಬಿಗಿ ನಿಲುವು ಇಸ್ರೇಲ್‍ಗೆ ಅಸ್ತಿತ್ವವಾದದ ಅಪಾಯವುಂಟು ಮಾಡುವ ಫೆಲಸ್ತೀನಿಯನ್ ರಾಷ್ಟ್ರದ ಸ್ಥಾಪನೆಯನ್ನು ಇದುವರೆಗೆ ತಡೆಹಿಡಿದಿದೆ. ಅಂತರಾಷ್ಟ್ರೀಯ ಅಥವಾ ಆಂತರಿಕ ಒತ್ತಡವನ್ನು ಎದುರಿಸಿ ಈ ನಿಲುವಿಗೆ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ.



Join Whatsapp