ಮುಂಬೈ | ಮ್ಯಾರಥಾನ್ ನಲ್ಲಿ ಇಬ್ಬರು ಸಾವು, 22 ಮಂದಿ ಆಸ್ಪತ್ರೆಗೆ ದಾಖಲು

Prasthutha|

ಮುಂಬೈ: ಭಾನುವಾರ ನಡೆದ ಮ್ಯಾರಥಾನ್ ನಲ್ಲಿ 74 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -


ಸಂಪೂರ್ಣ 42 ಕಿಲೋಮೀಟರ್ ಮ್ಯಾರಥಾನ್ ಓಟದ ವೇಳೆ 74 ವರ್ಷದ ರಾಜೇಂದ್ರ ಚಂದ್ಮಲ್ ಬೋರಾ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


ಬೋರಾ ಹಠಾತ್ತನೆ ಮರೀನ್ ಡ್ರೈವ್ನಲ್ಲಿ ಕುಸಿದು ಬಿದ್ದಿದ್ದು, ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.

- Advertisement -


ಮತ್ತೊಂದೆಡೆ, ಇನ್ನೋರ್ವ ಸ್ಪರ್ಧಿ ಸುವರ್ದೀಪ್ ಬ್ಯಾನರ್ಜಿ (46) ಕೂಡ ಮ್ಯಾರಥಾನ್ನಲ್ಲಿ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾರೆ. ಬ್ಯಾನರ್ಜಿ ಅವರು ವರ್ಲಿಯಿಂದ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು. ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದರು.ಪೊಲೀಸರು ಅವರನ್ನು ನಾಯರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಅವರು ಸಾವನ್ನಪ್ಪಿದ್ದಾರೆ ಹೇಳಿದ್ದಾರೆ, ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



Join Whatsapp