ಕೃಷಿಯಲ್ಲಿ ಪರಿಶ್ರಮದ ಜೊತೆಗೆ ತಂತ್ರಜ್ಞಾನ ಬಳಸಿದರೆ ತಕ್ಕ ಪ್ರತಿಫಲ‌: ಚಲುವರಾಯಸ್ವಾಮಿ

Prasthutha|

ಬೆಂಗಳೂರು : ಕೃಷಿಯಲ್ಲಿ ಅಗತ್ಯ ಪರಿಶ್ರಮದ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿದರೆ ರೈತನಿಗೆ ತಕ್ಕ ಪ್ರತಿಫಲ‌ ಸಿಕ್ಕೇ ಸಿಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

- Advertisement -

ಫರ್ಸ್ಟ್ ಸರ್ಕಲ್ ಸಂಘಟನೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು‌ ಮಾತನಾಡಿದರು.

ರೈತರು ಸುಸ್ಥಿರ ಕೃಷಿ ಮಾಡಬೇಕು. ಸಮಗ್ರ ಬೇಸಾಯ ಪದ್ದತಿ ಜೊತೆಗೆ ಪಶು ಸಂಗೋಪನೆ , ಮೀನುಗಾರಿಕೆ, ಕೋಳಿ ಸಾಕಾಣಿಕೆ ಮತ್ತಿತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

- Advertisement -

ಹವಾಮಾನ ಆಧಾರಿತ ಬೇಸಾಯ ಮಾಡಬೇಕು‌. ಮಣ್ಣಿನ ಸತ್ವ ಅರಿತು ಗೊಬ್ಬರ ಬಳಸಬೇಕು. ನೀರಿನ‌ ಸದ್ಬಳಕೆ‌, ಮಿತ ಬಳಕೆಯಾಗಬೇಕು ಎಂದು ಸಚಿವರು ಹೇಳಿದರು.

ಭೂಮಿಯಿಂದ ಪ್ರಯೋಗಾಲಯಕ್ಕೆ, ಪ್ರಯೋಗಾಲಯದಿಂದ ಭೂಮಿಗೆ ಎಂಬ ಆಶಯದಂತೆ
ಕೃಷಿ ವಿಶ್ವ ವಿದ್ಯಾನಿಲಯಗಳ ಸಂಶೋಧನೆ ರೈತರಿಗೆ ಸಂಪೂರ್ಣ , ಪರಿಣಾಮವಾಗಿ ತಲುಪಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು.

ಒಕ್ಕಲಿಕ ಕೇವಲ ವ್ಯವಸಾಯಕ್ಕೆ ಸೀಮಿತವಾಗದೆ
ಕೃಷಿಕರ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿ , ಪರಿಣಿತಿ ಹೊಂದಬೇಕು. ಉದ್ಯಮಿಗಳಾಗಿಯೂ ಯಶಸ್ವಿಯಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ‌ ಮಾಡಿಕೊಳ್ಳಬೇಕು ಎಂದರು ಎನ್ .ಚಲುವರಾಯಸ್ವಾಮಿ ಕರೆ ನೀಡಿದರು.

ಫರ್ಸ್ಟ್ ಸರ್ಕಲ್ ಸಂಸ್ಥೆ ಉದ್ಯಮಿ ಒಕ್ಕಲಿಗ ವೇದಿಕೆ ರೂಪಿಸಿರುವುದು ಅಭಿನಂದನಾರ್ಹ ಇದು ಇನ್ನಷ್ಟು ಸಂಘಟಿತವಾಗಲಿ ಎಂದು ಸಚಿವರು ಹಾರೈಸಿದರು.



Join Whatsapp