ಭಾರತದೊಂದಿಗೆ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನಿಗದಿತ ಭಾಷಣವನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.
‘ಭಾರತ ಮತ್ತು ಶ್ರೀಲಂಕಾದ ನಡುವಿನ ಘರ್ಷಣೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ ಖಾನ್ ಭಾಷಣ ಸಂಸತಿನಲ್ಲಿ ನಿರ್ಭಂದಿಸಲಾಗಿದೆ’ಎಂದು ಕೊಲೊಂಬೋ ಗೆಝಟ್ ವರದಿ ಮಾಡಿದೆ.
ಕೊಲಂಬೊ ಸರ್ಕಾರವು ಚೀನಾದ ಸಾಲದ ಬಲೆಗೆ ಸಿಲುಕಿಕೊಂಡಾಗ ಭಾರತ ಸಹಾಯ ಮಾಡಿದೆ ಮತ್ತು ಇತ್ತೀಚೆಗೆ 5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ.ಈ ನಿಟ್ಟಿನಲ್ಲಿ ಖಾನ್ ಸಂಸತ್ತಿನ ಭಾಷಣ ಭಾರತದೊಂದಿಗೆ ತನ್ನ ಸಂಬಂಧವಕ್ಕೆ ದಕ್ಕೆಯಾಗಬಹುದು ಎಂಬ ಕಾರಣದಿಂದ ರದ್ದುಗೊಳಿಸಲಾಗಿದೆ.