ಇಂಫಾಲ್: ಮಣಿಪುರದಿಂದ 110 ಕಿಮೀ ದೂರದಲ್ಲಿರುವ ಗಡಿ ನಗರ ಮೊರೆಹ್‌ನಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಪೊಲೀಸ್ ಕಮಾಂಡೋ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಐಆರ್‌ಬಿ ಸಿಬ್ಬಂದಿ ವಾಂಗ್ ಖೇಮ್ ಸೊಮೊರ್ಜಿತ್ ಮೃತ ವ್ಯಕ್ತಿ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಪ್ರಮುಖ ವ್ಯಾಪಾರ ನಗರವಾದ ಮೊರೆಹ್ ನಲ್ಲಿಬೆಳಗ್ಗೆಯಿಂದಲೇ ಗುಂಡಿನ ಚಕಮಕಿ ಶುರುವಾಗಿದೆ. ದಾಳಿಕೋರರು ತಾತ್ಕಾಲಿಕ ಕಮಾಂಡೋ ಪೋಸ್ಟ್‌ಗೆ ಆರ್‌ಪಿಜಿ ಶೆಲ್‌ಗಳನ್ನು ಎಸೆದಿದ್ದು ಸುತ್ತಮುತ್ತ ನಿಂತಿದ್ದ ಹಲವಾರು ವಾಹನಗಳಿಗೆ ಹಾನಿಗೊಳಗಾಗಿರುವುದಾಗಿ ತಿಳಿಸಿದೆ. ಮೊರೆಹ್ ನಲ್ಲಿ ಸಾವನ್ನಪ್ಪಿರುವ ಐಆರ್‌ಬಿ ಸಿಬ್ಬಂದಿ ವಾಂಗ್ ಖೇಮ್ ಸೊಮೊರ್ಜಿತ್ ಸೊಮೊರ್ಜಿತ್ ಇಂಫಾಲ್ ಪಶ್ಚಿಮ ಜಿಲ್ಲೆಯ ಮಾಲೋಮ್ ನವರು ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ಜನಾಂಗದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ನಂತರ ಕುಕಿ ಗುಂಪುಗಳ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು ಇದೀಗ ಹಿಂಸಾಚಾರಕ್ಕೆ ತಿರುಗಿರಬಹುದು ಎನ್ನಲಾಗಿದೆ.
ಮೊರೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಕೊಂದ ಇಬ್ಬರು ಶಂಕಿತರನ್ನು ಬಂಧಿಸಿದ ಎರಡು ದಿನಗಳ ನಂತರ ಹಿಂಸಾಚಾರ ನಡೆದಿದೆ.