ದೇಶಪ್ರೇಮ, ದೇಶ ಭಕ್ತಿ ಭಾಷಣಕ್ಕೆ ಸೀಮಿತವಾಗಿದೆ: ಸಿಎಂ ಸಿದ್ದರಾಮಯ್ಯ

Prasthutha|

ಬೆಳಗಾವಿ: ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ. ಇಂದು ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಅವರು ಎಂದಾದರೂ ತ್ಯಾಗ, ಬಲಿದಾನ ಮಾಡಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

- Advertisement -


ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಮಾತನಾಡಿದ ಅವರು, ಸಿಪಾಯಿ ದಂಗೆಗೂ ಮೊದಲು ಟಿಪ್ಪು ಸುಲ್ತಾನ್, ವೆಂಕಟಪ್ಪ ನಾಯಕ, ಕಿತ್ತೂರು ಚೆನ್ನಮ್ಮ, ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.


ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆಯನ್ನ ಸರ್ಕಾರ ನಿರ್ಮಿಸಿದೆ. ಯುವಕ, ಯುವತಿಯರಿಗೆ ರಾಯಣ್ಣ ಸೈನಿಕ ಶಾಲೆ ಸ್ಫೂರ್ತಿಯಾಗಬೇಕು. ದೇಶಭಕ್ತಿಯಿಂದ ವಿಮುಕ್ತರಾಗಬಾರದು ಎಂದು ಸೈನಿಕ ಶಾಲೆ ಸ್ಥಾಪನೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಾಧಿಕಾರ ರಚನೆ ಬಳಿಕ ರಾಯಣ್ಣ ಹೆಸರು ಶಾಶ್ವತವಾಗಿ ಇರಬೇಕು. ಪ್ರಾಧಿಕಾರಕ್ಕೆ ಅಂದು ನಮ್ಮ ಸರ್ಕಾರ 100 ಎಕರೆ ಜಮೀನು ನೀಡಿತ್ತು ಎಂದು ಹೇಳಿದ್ದಾರೆ.



Join Whatsapp