ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡು: ರಾಹುಲ್ ಗಾಂಧಿ

Prasthutha|

ನಾಗಾಲ್ಯಾಂಡ್ : ‘ಒಬ್ಬ ಭಾರತೀಯನಾಗಿ ನಮ್ಮ ಪ್ರಧಾನಿ ಮಣಿಪುರಕ್ಕೆ ಹೋಗದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ಅಭಿವೃದ್ಧಿಯಿಂದ ದೂರ ಉಳಿದಿವೆ. ಇವುಗಳನ್ನು ಮುನ್ನೆಲೆಗೆ ತರುವುದೇ ಕಾಂಗ್ರೆಸ್ ನ ಆಶಯವಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -


ಭಾರತ್ ಜೋಡೊ ನ್ಯಾಯ ಯಾತ್ರೆಯ ನಾಲ್ಕನೇ ದಿನವಾದ ಇಂದು ನಾಗಾಲ್ಯಾಂಡ್‌ ನ ಮೊಕೊಕ್‌ ಚುಂಗ್‌ ನ ಜನರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು.
‘ಬಿಜೆಪಿಯ ರಾಜಕೀಯ ಕುತಂತ್ರದಿಂದ ಮಣಿಪುರ ಛಿಧ್ರವಾಯಿತು. ದಂಗೆ ಎಬ್ಬಿಸುವ ಮೂಲಕ ಇಡೀ ರಾಜ್ಯವನ್ನೇ ಸುಟ್ಟು ಹಾಕಲಾಯಿತು. ಆದರೆ ಆ ರಾಜ್ಯಕ್ಕೆ ಕಾಲಿಡಲು ಪ್ರಧಾನಿಗೆ ಸಾಧ್ಯವಾಗಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.


‘ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಒಂದು ಮಗುವಿನ ಜೊತೆ ಎಲ್ಲ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ನಾಗಾಲ್ಯಾಂಡ್ ನ ಒಂದು ಮಗು ಸ್ಪರ್ಧಿಸಲು ಸಾಧ್ಯವೇ?’ ಎಂದು ನಾಗಾಲ್ಯಾಂಡ್ ನ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.



Join Whatsapp